ನಮ್ಮ ಬಗ್ಗೆ

| ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಾಯ |

| ಚಕ್ಷುರುನ್ಮೀಲಿತಂ ಯೇನಃ ತಸ್ಮೈ ಶ್ರೀ ಗುರವೇ ನಮಃ |

ಜಗತ್ತಿಗೇ ಹಲವು ‘ಪ್ರಥಮ’ಗಳನ್ನು ನೀಡಿದ ದೇಶ ನಮ್ಮ ಭರತ ಭೂಮಿ. ಅಪ್ರತಿಮ ವಿಶ್ವವಿದ್ಯಾನಿಲಯಗಳಾಗಿದ್ದ ನಲಂದಾ,ತಕ್ಷಶಿಲಾಗಳ ಜನನಿ ತಾಯಿಭಾರತಿ, ಗಣಿತ(ಆರ್ಯಭಟ), ಖಗೋಳ-ಅಂತರಿಕ್ಷ ವಿಜ್ಞಾನ(ಭಾಸ್ಕರಾಚಾರ್ಯ),ವಿಮಾನ ತಂತ್ರಜ್ಞಾನ(ಭಾರಧ್ವಾಜ ಮುನಿ)ಗಳನ್ನು ಅದೆಷ್ಟೋ ಪೂರ್ವದಲ್ಲೇ ನಮ್ಮ ಋಷಿ ಮುನಿಗಳು ಸಂಶೋಧಿಸಿ ಅವಿಷ್ಕಾರ ಗ್ರಂಥಗಳನ್ನು ಜಗತ್ತಿಗೆ ಸಮರ್ಪಿಸಿದ್ದರು.

“ಜನನೀ ಜನ್ಮ ಸೌಖ್ಯಾನಾಂ ವರ್ಧನೀ ಕುಲಸಂಪದಾಮ್   ಪದವೀ ಪೂರ್ವ ಪುಣ್ಯಾನಾಂ ಲಿಖ್ಯತೇ ಜನ್ಮ ಪತ್ರಿಕಾ”

   ಎಂಬತ್ನಾಲ್ಕು ಲಕ್ಷ ಕೋಟಿ ಜೀವರಾಶ್ಯಾದಿ ಜನ್ಮಗಳನ್ನು ಕಳೆದು ಈ ಮಾನವ ಜನ್ಮವನ್ನು  ತಳೆದಾಗ  “ನೀ ಹುಟ್ಟುವಾಗಲೇ ನಿಶ್ಚಯವಾಗಿರುತ್ತೇ ನೀನಾರೆಂದು. ನೀನೇನಾಗುವೆನೆಂದು...!!” ಇದು ನಿಜವೇ..?

  ಜ್ಯೋತಿಷ ಶಾಸ್ತ್ರ ಎಂದರೇನು...? ಅದರ ವ್ಯಾಪ್ತಿ ಎಷ್ಟು...? ‘ವಾಸ್ತು’ ಎಂಬುವುದು ನಿಜವಾಗಿಯೂ ಇದೆಯೇ...? ಇದ್ದರೆ ಅದೆಷ್ಟು ಪರಿಣಾಮಕಾರಿ...?  ಸೃಷ್ಟಿಯ ಆದಿಯಿಂದ ಇಂದಿನ ದಿನದವರೆಗೂ ಸೂರ್ಯ ಚಂದ್ರಗ್ರಹಣಗಳು ಅದು ಹೇಗೆ  ಪಂಚಾಂಗದಲ್ಲಿ ನಮೂದಿಸಿದ ದಿನ-ದಿನಾಂಕ-ಸಮಯ-ನಿಮಿಷಗಳಲ್ಲೇ ನಡೆಯುತ್ತದೆ...?  ಅದೇಕೆ ಬದಲಾಗುವುದಿಲ್ಲ...?

  ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಒಂದು ಪ್ರಾಮಾಣಿಕ ಪ್ರಯತ್ನವೇ ನಮ್ಮೀ ಪತ್ರಿಕೆ ‘ಜ್ಯೋತಿಷ ಮಿತ್ರ’. ಒಂದೇ ಆಭಿರುಚಿಂಯುಳ್ಳ ಸಮಾನ ಮನಸ್ಕ ಮಿತ್ರರೆಲ್ಲಾ ಒಗ್ಗೂಡಿಕೊಂಡು,ಒಂದು ತಂಡವನ್ನು ಕಟ್ಟಿಕೊಂಡು,ನಮ್ಮ ಪುರಾತನ- ಸನಾತನ ವಿದ್ಯೆಯಾದ ‘ಜ್ಯೋತಿಷ ಶಾಸ್ತ್ರ’ವನ್ನು ಮನೆಮನೆಗೂ ತಲುಪಿಸಬೇಕೆಂಬ ಆಶಯದೊಂದಿಗೆ ಈ ದೈನಿಕವನ್ನು ಪ್ರಕಟಿಸುತ್ತಿದ್ದೇವೆ.ಜ್ಯೋತಿಷ ಶಾಸ್ತ್ರ, ವಾಸ್ತು ಶಾಸ್ತ್ರ, ಸಂಖ್ಯಾ ಶಾಸ್ತ್ರ, ಯೋಗ ಹಾಗೂ ಆಧ್ಯಾತ್ಮಿಕತೆಯಲ್ಲಿ ಆಸಕ್ತಿವುಳ್ಳವರಿಗೆ ಮತ್ತು ಈ ಬಗ್ಗೆ ಆಧ್ಯಯನ ಮಾಡುವವರಿಗಾಗಿ ಈ ಪತ್ರಿಕೆ.

   ಇದು ಆನ್‍ಲೈನ್ ಮೂಲಕ ಪ್ರಸರಣವಾಗುವ ಒಂದು ದೈನಿಕ.ಇದು ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ.ಇದು ಸಂಪೂರ್ಣ ಉಚಿತ ಸೇವೆಯಾಗಿದ್ದು,ನಮ್ಮ ಈ ವೆಬ್‍ಸೈಟ್‍ನಲ್ಲಿ ಲಭ್ಯವಿದೆ.

  ಗುರುಗಳು,ಮಿತ್ರರು, ಹಿತೈಷಿಗಳು... ಹೀಗೆ ಎಲ್ಲವೂ ಆಗಿರುವ ಖ್ಯಾತ ಜ್ಯೋತಿಷಿ, ವಾಸ್ತು ಸಲಹೆಗಾರು, ಸಂಖ್ಯಾಶಾಸ್ತ್ರಜ್ಞರು, ನಾಡೀ ಜ್ಯೋತಿಷ ಪರಿಣತರು, ಆಧ್ಯಾತ್ಮ ಚಿಕಿತ್ಸಕರಾದ   ಶ್ರೀಯುತ ಶ್ರೀಷ ಎಸ್.ರವರ ಮಾರ್ಗದರ್ಶನದಲ್ಲಿ ಇದು ಮುಂದುವರಿಯುತ್ತಿದೆ.

  ಸಸ್ನೇಹ ಪ್ರಣಾಮಗಳೊಂದಿಗೆ                   

 

ಜ್ಯೋತಿಷ ಮಿತ್ರ ತಂಡ