
ನಿಂಬೆ ಹಣ್ಣು ದೃಷ್ಟಿ ದೋಷವನ್ನು, ಕೆಟ್ಟ ಶಕ್ತಿಗಳನ್ನು ತೊಲಗಿಸುವ ಮಹಾಶಕ್ತಿ ಈ ನಿಂಬೆ ಹಣ್ಣಿನಲ್ಲಿ ಇದೆ. ಅದೇ ಕಾರಣಕ್ಕೆ ವ್ಯಾಪಾರಿಗಳು ಇದನ್ನು ಅಂಗಡಿಗಳ ಮುಂದೆ ನೇತು ಹಾಕಿರುತ್ತಾರೆ .ಮಂತ್ರ ತಂತ್ರಗಳಂತಹ ದುಷ್ಟ ಮತ್ತು ನಕಾರಾತ್ಮಕ ಶಕ್ತಿಗಳನ್ನು ನಾಶ ಮಾಡಲು ನಿಂಬೆಹಣ್ಣು ತುಂಬ ಪ್ರಮುಖ ಪಾತ್ರ ವಹಿಸುತ್ತದೆ. ಗುರುವಾರದ ದಿನ ಅಂಜನೇಯಸ್ವಾಮಿ ದೇವಸ್ಥಾನಕ್ಕೆ ನಾಲ್ಕು ನಿಂಬೆಹಣ್ಣು ಮತ್ತು ಲವಂಗ ವನ್ನು ತೆಗೆದುಕೊಂಡು ಹೋಗಿ ಕೊಟ್ಟು ಪೂಜೆ ಮಾಡಿಸಿ ಬಂದರೆ ದೃಷ್ಟಿ ದೋಷ ನಿವಾರಣೆ ಆಗುತ್ತದೆ.

ವ್ಯಾಪಾರ ನಷ್ಟದಲ್ಲಿ ಸಾಗುತ್ತಿದ್ದರೆ ಒಂದು ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು ನಾಲ್ಕು ಮೂಲೆಗಳಿಗೂ ಒಂದೊಂದು ಬಾರಿ ಮುಟ್ಟಿಸಿ ನಂತರ ಆ ನಿಂಬೆಹಣ್ಣನ್ನು ನಾಲ್ಕು ತುಂಡುಗಳಾಗಿ ಮಾಡಿ ನಾಲ್ಕು ದಿಕ್ಕಿನಲ್ಲಿ ಇಡಬೇಕು. ಇದರಿಂದ ದೃಷ್ಟಿದೋಷ ದೂರವಾಗುತ್ತದೆ.

ಕಣ್ಣಿನ ದೃಷ್ಟಿ ಬಿದ್ದರೆ ಅವರಿಗೆ ಒಂದು ನಿಂಬೆಹಣ್ಣಿನಿಂದ ಕೆಳಗಿನಿಂದ ಮೇಲಕ್ಕೆ ಮತ್ತೆ ಮೇಲಿನಿಂದ ಕೆಳಗೆ ಮೂರು ಬಾರು ನಿವಾಳಿಸಿ ಆ ನಿಂಬೆಹಣ್ಣನ್ನು ನಾಲ್ಕು ಹೋಳಾಗಿ ಕತ್ತರಿಸಿ ಯಾರು ಇಲ್ಲದ ಜಾಗದಲ್ಲಿ ಮೂರು ದಾರಿ ಕೂಡಿರುವ ಸ್ಥಳದಲ್ಲಿ ಯಾರಿಗೂ ಕಾಣಿಸದಂತೆ ಎಸೆದು ಹಿಂದೆ ತಿರುಗಿ ನೋಡದೆ ಬಂದುಬಿಡಿ.

ನಿಮ್ಮ ಮನೆಯ ಮುಂದೆ ಒಂದು ನಿಂಬೆಹಣ್ಣಿನ ಗಿಡ ಇದ್ದರೆ ಅದು ದುಷ್ಟ ಶಕ್ತಿಯನ್ನು ಮನೆಯ ಹತ್ತಿರ ಸುಳಿಯದಂತೆ ಆ ಮನೆಯನ್ನು, ಮನೆಯಲ್ಲಿ ವಾಸಿಸುವರನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ ಒಂದು ನಿಂಬೆ ಹಣ್ಣಿನ ಗಿಡ ಮನೆಯಲ್ಲಿ, ಯಾವುದೇ ಕಚೇರಿಯಂತಹ ಸ್ಥಳದಲ್ಲಿ ವಾಸ್ತು ದೋಷಗಳು ಇದ್ದಲ್ಲಿ ಅವುಗಳನ್ನು ದೂರವಾಗಿಸುತ್ತದೆ.


