ನಿತ್ಯ ಪಂಚಾಂಗ

ಗುರು ಗೋಚಾರ ಫಲ

123

ಗುರು ಗ್ರಹವು ಖಗೋಳದಲ್ಲಿ ಅತ್ಯಂತ ದೊಡ್ಡ ಹಾಗೂ ಪ್ರಭಾವಿತ ಗ್ರಹ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಕುಂಡಲಿಯಲ್ಲಿ ಗುರುವು ಯಾವ ಸ್ಥಾನ ಅಥವಾ ಯಾವ ಮನೆಯಲ್ಲಿ ಇದ್ದಾನೆ ಎನ್ನುವ ಆಧಾರದ ಮೇಲೆ ಅವರ ಭವಿಷ್ಯ ನಿಂತಿರುತ್ತದೆ.

123

ಗುರುವಿನ ಪ್ರಭಾವ ಉತ್ತಮವಾಗಿದ್ದು, ಅನುಕೂಲಕಾರಕನಾಗಿದ್ದರೆ ಬಹುಬೇಗ ಉದ್ಯೋಗ, ವಿವಾಹ, ಕುಟುಂಬ, ಉತ್ತಮ ಆರೋಗ್ಯ ಹಾಗೂ ಸಮಾಜದಲ್ಲಿ ಉತ್ತಮ ಸ್ಥಾನ-ಮಾನಗಳನ್ನು ಪಡೆದುಕೊಳ್ಳುತ್ತಾನೆ. ಗುರುವಿನ ಬಲ ಉತ್ತಮವಾಗಿರದೆ ಇದ್ದರೆ ಜೀವನದಲ್ಲಿ ಸಾಕಷ್ಟು ಕಷ್ಟ ಹಾಗೂ ಪ್ರತಿಯೊಂದು ವಿಚಾರದಲ್ಲೂ ಅಡೆತಡೆಯನ್ನು ಅನುಭವಿಸುತ್ತಲೇ ಇರುತ್ತಾನೆ.

ಗುರುವೆಂದರೆ – ಪರಿಪೂರ್ಣ  ಜ್ಞಾನದ ಸಂಕೇತ, ದೇವತಾ ಗುಣದ ಸಂಕೇತ.

ಗುರು ಒಂದು ರಾಶಿಯಲ್ಲಿ ಸಾಮಾನ್ಯವಾಗಿ 1 ವರ್ಷಗಳ ಕಾಲ ಸಂಚಾರ ಮಾಡುತ್ತಾನೆ. ಕಳೆದ ಡಿಸೆಂಬರ್ ನಲ್ಲಿ ಮಕರ ರಾಶಿಯನ್ನು ಪ್ರವೇಶ ಮಾಡಿದ ಗುರು “ ಅತಿಚಾರ ” ಗತಿಯಲ್ಲಿದ್ದ ಕಾರಣ ಕೇವಲ 5 ತಿಂಗಳಲ್ಲಿ ಮಕರ ರಾಶಿಯಲ್ಲಿ ಸಂಚರಿಸಿ, ಮುಂದಿನ ರಾಶಿಯಾದ ಕುಂಭರಾಶಿಯನ್ನು ಪ್ರವೇಶಿಸುವನು. ಏಪ್ರಿಲ್ 6 ರಿಂದ ಸಪ್ಟೆಂಬರ್ 14 ರ ವರೆಗೆ ಗುರು ಕುಂಭ ರಾಶಿಯಲ್ಲಿ ಸಂಚಾರ ಮಾಡುವನು.

೬೫೫೫

೧೪೫

 ಮೇಷ ರಾಶಿಯವರಿಗೆ ಗುರು ಲಾಭಭಾವ ಅಂದರೆ ಏಕದಶಾ ಭಾವದಲ್ಲಿ ಸಂಚಾರ ಮಾಡುವನು. ಸಕಲ ವಿಧಗಳಿಂದ ಲಾಭವಾಗುವುದು. ಮುಖ್ಯವಾಗಿ ಧನಲಾಭವಾಗುವುದು, ತಂದೆಯಿಂದ ಲಾಭವಾಗುವುದು. ಪಿತ್ರಾರ್ಜಿತ ಆಸ್ತಿ ಲಭಿಸುವುದು. ಸಂತಾನ ಇಲ್ಲದವರಿಗೆ ಸಂತಾನ ಯೋಗ ಕೂಡಿ ಬರುವುದು. ಅವಿವಾಹಿತರಿಗೆ ವಿವಾಹವಾಗುವುದು. ಒಡೆದು ಹೋದ ಕುಟುಂಬ ಮತ್ತೇ ಒಂದಾಗುವುದು. ವ್ಯವಹಾರದಲ್ಲಿ ನಷ್ಟ ಅನುಭವಿಸು ತ್ತಿರುವವರಿಗೆ ಮುಂದೆ ಶುಭವಾಗುವುದು.

896

ವೃಷಭ ರಾಶಿಯವರಿಗೆ ಗುರು ಕರ್ಮಸ್ಥಾನ ಅಂದರೆ ದಶಮ ಸ್ಥಾನದಲ್ಲಿ ಸಂಚಾರಮಾಡುವನು. ಆಕಸ್ಮಿಕವಾಗಿ  ಧನಲಾಭವಾಗುವುದು. ಕೌಟುಂಬಿಕ ಸಮಸ್ಯೆಗಳು ದೂರವಾಗುವುದು.ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವುದು. ಅನಾರೋಗ್ಯ ಸಮಸ್ಯೆಗಳು ದೂರವಾಗುವುದು. ಮನೆಯಲ್ಲಿ ಶುಭಕಾರ್ಯಗಳು ನೆರವೇರುವುದು. ವಾಹನ / ಮನೆ / ಭೂಮಿ / ಚಿನ್ನಾಭರಣ ಖರೀದಿಸುವಿರಿ. ದೇವತಾ ಕಾರ್ಯ ನಿಮಿತ್ತ  ದೂರದ ಊರಿಗೆ ಪ್ರವಾಸ ಹೋಗುವಿರಿ. ಶತೃಗಳು ಮಿತ್ರರಾಗುವರು. ಆಧ್ಯಾತ್ಮಕ್ಕೆ ಸಂಬಂಧಿಸಿದ ವಿದ್ಯೆಗಳನ್ನು ಕಲಿಯಬಯಸುವಿರಿ.

೮೬೫

ಮಿಥುನ  ರಾಶಿಯವರಿಗೆ ಗುರು ಭಾಗ್ಯಭಾವದಲ್ಲಿ   ಅಂದರೆ ನವಮ ಭಾವದಲ್ಲಿ ಸಂಚಾರ ಮಾಡುವನು. ವೃತ್ತಿಯಲ್ಲಿದ ಅಡೆತಡೆಗಳು ದೂರವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಿಸುವುದು. ಅವಿವಾಹಿತರಿಗೆ ವಿವಾಹಯೋಗ ಕೂಡಿ ಬರುವುದು. ಕೌಟುಂಬಿಕ ಸಮಸ್ಯೆಗಳು ದೂರವಾಗುವುದು. ತೀರ್ಥಕ್ಷೇತ್ರಗಳಿಗೆ ಪ್ರವಾಸ ಹೋಗುವಿರಿ. ಸಂತಾನ ಇಲ್ಲದವರಿಗೆ ಸಂತಾನ ಯೋಗ ಕೂಡಿಬರುವುದು. ವಾಹನ / ಮನೆ / ಭೂಮಿ / ಚಿನ್ನಾಭರಣ  ಖರೀದಿಸುವಿರಿ.

೫೫೫

ಕರ್ಕಾಟಕ  ರಾಶಿಯವರಿಗೆ ಗುರು ದುಸ್ಥಾನದಲ್ಲಿ  ಅಂದರೆ  ಅಷ್ಟಮ  ಭಾವದಲ್ಲಿ ಸಂಚಾರ ಮಾಡುವನು. ವಾಹನ / ಮನೆ / ಭೂಮಿ ಖರೀದಿಸುವ ಯೋಗವಿದ್ದರೂ ಅಡೆತಡೆಗಳು ಎದುರಾಗುವುದು.ಕೊಟ್ಟ ಹಣ ಕೈಸೇರದೆ ಆತಂಕಕ್ಕೊಳಗಾಗುವಿರಿ. ಸಾಲ ಮಾಡುವ ಪರಿಸ್ಥಿತಿ ಎದುರಾಗುವುದು. ಮನೆಯಲ್ಲಿ  ದೇವತಾ ಕಾರ್ಯಗಳನ್ನು ನೆರವೇರಿಸುವಿರಿ. ತಂದೆಗೆ ಅನಾರೋಗ್ಯ ಸಮಸ್ಯೆ ಎದುರಾಗುವುದು. ಶತೃಗಳು ನಿಮ್ಮಿಂದ ದೂರವಾಗುವರು. ವಾಮಮಾರ್ಗದ ಮೂಲಕ ಹಣ ಮಾಡಲು ಪ್ರಯತ್ನಿಸುವಿರಿ. ಕೌಟುಂಬಿಕ ಸಮಸ್ಯೆಗಳು ಎದುರಾಗುವುದು.

123456

ಸಿಂಹ ರಾಶಿಯವರಿಗೆ ಗುರು ವಿವಾಹ ಸ್ಥಾನ ಅಂದರೆ ಸಪ್ತಮ  ಭಾವದಲ್ಲಿ ಸಂಚಾರ ಮಾಡುವನು. ಆಕಸ್ಮಿಕವಾಗಿ ಅದೃಷ್ಟವಂತರಾಗುವಿರಿ. ವಿವಾಹ-ಸಂತಾನಯೋಗ ಕೂಡಿ ಬರುವುದು. ಆಧ್ಯಾತ್ಮಿಕವಾಗಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ಹೊಸ ವ್ಯವಹಾರ ಆರಂಭಿಸುವವರಿಗೆ ಶುಭಕಾಲವಿದು. ಆಕಸ್ಮಿಕವಾಗಿ ಧನಲಾಭವಾಗುವುದು. ದೂರದ ಊರಿಗೆ ಪ್ರವಾಸ ಹೋಗುವಿರಿ. ರಾಜಕೀಯದಲ್ಲಿ ಇರುವವರಿಗೆ ಉನ್ನತ ಸ್ಥಾನಮಾನ ಲಭಿಸುವುದು. ವಿವಾಹ ವಿಚ್ಚೇದನಕ್ಕೆ ಪ್ರಯತ್ನಿಸುವವರಿಗೆ  ಹಿನ್ನಡೆಯಾಗುವುದು.

123

ಕನ್ಯಾರಾಶಿಯವರಿಗೆ ಗುರು ಶತೃ ಸ್ಥಾನವಾದ ಷಷ್ಠಭಾವದಲ್ಲಿ ಸಂಚಾರ ಮಾಡುವನು. ದೇವತಾ ಕಾರ್ಯಗಳಿಗೆ ವಿಪರೀತ ಧನವ್ಯಯ ಆಗುವುದು.  ವಿವಾಹ ಪ್ರಯತ್ನಕ್ಕೆ ಹಿನ್ನಡೆಯಾಗುವುದು. ಮಿತ್ರರು ಶತೃಗಳಾಗುವರು. ಆತ್ಮವಿಶ್ವಾಸದ ಕೊರತೆಯಿಂದ ಕೈಗೊಂಡ ಕೆಲಸ – ಕಾರ್ಯಗಳಿಗೆ ವಿಘ್ನ ಎದುರಾಗುವುದು. ದೇವರಲ್ಲಿ ನಂಬಿಕೆ ಕಡಿಮೆ ಯಾಗುವುದು. ವ್ಯಾಪಾರ – ವ್ಯವಹಾರ ಮಾಡುವವರಿಗೆ ಹಿನ್ನಡೆಯಾಗುವುದು. ಷಷ್ಠದ ಗುರು ಅಶುಭ ಫಲವನ್ನು ನೀಡುವುದರಿಂದ ಸಪ್ಟೆಂಬರ್ 14ರ ವರೆಗೆ ಆದಷ್ಟು ಎಚ್ಚರಿಕೆಯಿಂದ ಇರಬೇಕು.

8888

೧೨೩

ತುಲಾ ರಾಶಿಯವರಿಗೆ ಗುರು ಪೂರ್ವಪುಣ್ಯ ಸ್ಥಾನವಾದ ಪಂಚಮದಲ್ಲಿ ಸಂಚಾರ ಮಾಡುವನು. ಭಾಗ್ಯೋದಯವಾಗುವುದು. ಪಿತ್ರಾರ್ಜಿತ ಆಸ್ತಿ ಲಭಿಸುವುದು. ದೇವತಾ ಕಾರ್ಯಗಳಿಗೆ ದೂರದ ಊರಿಗೆ ಪ್ರವಾಸ ಹೋಗುವಿರಿ. ಅವಿವಾಹಿತರಿಗೆ ವಿವಾಹಯೋಗ ಕೂಡಿಬರುವುದು. ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳಿಂದ ಬಳಲುವಿರಿ. ವಾಮಮಾರ್ಗದ ಮೂಲಕ ಹಣ ಮಾಡಲು ಪ್ರಯತ್ನಿಸುವಿರಿ.  ನೀವು ಹಿರಿಯರಾಗಿದ್ದರೆ ಮಕ್ಕಳಿಂದ ನೋವು ಅನುಭವಿಸ ಬೇಕಾಗುತ್ತದೆ. ಉದ್ಯೋಗ ಮಾಡುವವರಿಗೆ ಪ್ರಮೋಷನ್ ಲಭಿಸುವುದು. ಆಧ್ಯಾತ್ಮಿಕವಾಗಿ  ಜ್ಞಾನಿಗಳಾಗುವಿರಿ.

444

ವೃಶ್ಚಿಕ ರಾಶಿಯವರಿಗೆ ಗುರು ಸುಖಸ್ಥಾನವಾದ ಚತುರ್ಥ ಭಾವದಲ್ಲಿ ಸಂಚಾರ ಮಾಡುವನು. ವಾಹನ / ಮನೆ / ಭೂಮಿ / ಚಿನ್ನಾಭರಣ ಖರೀದಿಸುವ ಯೋಗ ಕೂಡಿ ಬರುವುದು. ದೀರ್ಘ ಕಾಲ ಕಾಯಿಲೆಯಿಂದ ಮುಕ್ತಿ ಪಡೆದು ಸುಖ ಜೀವನ ನಡೆಸುವಿರಿ. ಹಣಕಾಸು ಸಮಸ್ಯೆ ದೂರವಾಗುವುದು. ಮನೆಯವರೊಂದಿಗಿದ್ದ  ವೈರತ್ವ ದೂರವಾಗುವುದು. ಮನೆಯಲ್ಲಿ ಶುಭಕಾರ್ಯಗಳು ನೆರವೇರುವುದು. ಮಕ್ಕಳಿಲ್ಲದವರಿಗೆ ಸಂತಾನಯೋಗ ಕೂಡಿಬರುವುದು. ಸಮಾಜದ ಗೌರವಕ್ಕೆ ಪಾತ್ರರಾಗುವಿರಿ.

45458          

ಧನು ರಾಶಿಯವರಿಗೆ ಗುರು ಧೈರ್ಯ ಸ್ಥಾನವಾದ ತೃತೀಯಾ ಭಾವದಲ್ಲಿ ಸಂಚಾರ ಮಾಡುವನು. ವಿಪರೀತ ಧೈರ್ಯಶಾಲಿಗಳಾಗುವಿರಿ. ವಿವಾಹಯೋಗ ಕೂಡಿಬರುವುದು. ಹೊಸ ವ್ಯವಹಾರ ಒಪ್ಪಂದಗಳಿಗೆ ಇದು ಸಕಾಲ. ಮಿತ್ರರಿಂದ ಲಾಭವಾಗುವುದು. ಪಿತ್ರಾರ್ಜಿತ ಆಸ್ತಿ ಲಭಿಸುವುದು. ದೇವತಾ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ಧನಲಾಭ, ಭೂಲಾಭವಾಗುವುದು. ಸುಖ- ಭೋಗಕ್ಕೆ ಅಧಿಕ ಧನವ್ಯಯವಾಗುವುದು. ತಂದೆಯೊಂದಿಗಿದ್ದ ವೈರತ್ವ ದೂರವಾಗುವುದು. ಜ್ಯೋತಿಷಿ, ಗುರುಗಳಿಂದ ಸಲಹೆ ಪಡೆಯುವಿರಿ.      

78989

ಮಕರ ರಾಶಿಯವರಿಗೆ ಗುರು ಕುಟುಂಬ, ಧನಭಾವವಾದ ದ್ವಿತೀಯ ಭಾವದಲ್ಲಿ ಸಂಚಾರ ಮಾಡುವನು. ಕೆಲಸ ಕಾರ್ಯಗಳಿಗಿದ್ದ ಅಡ್ಡಿ ಆತಂಕಗಳು ದೂರವಾಗುವವು. ಮಕ್ಕಳಿಲ್ಲದವರಿಗೆ ಸಂತಾನಯೋಗ ಕೂಡಿ ಬರುವುದು. ಆಕಸ್ಮಿಕವಾಗಿ ಧನನಷ್ಟವಾಗುವುದು. ಕುಟುಂಬದಲ್ಲಿ ಶುಭಕಾರ್ಯಗಳು ನೆರವೇರುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವುದು. ಅನಾರೋಗ್ಯ ಸಮಸ್ಯೆಗಳು ದೂರವಾಗುವುದು. ಶತೃಗಳು ಮಿತ್ರರಾಗುವರು. ಕೋರ್ಟ್ ಕೇಸ್ ಇದ್ದರೆ ಅದು  ನಿಮ್ಮ  ಪರವಾಗುವುದು.

15655

ಕುಂಭ ರಾಶಿಯವರಿಗೆ  ಗುರು  ಜನ್ಮರಾಶಿಯಲ್ಲಿ ಸಂಚಾರ ಮಾಡುವನು. ಧನಲಾಭಯೋಗ ನಿಮ್ಮದಾಗುವುದು. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರುವುದು. ಕೊಟ್ಟ ಹಣ ಪುನಃ ನಿಮ್ಮ ಕೈಸೇರುವುದು. ಹೊಸ ವ್ಯವಹಾರ ಒಪ್ಪಂದಗಳಿಗೆ ಇದು ಸಕಾಲವಾಗಿದೆ. ಕೌಟುಂಬಿಕ ಸಮಸ್ಯೆಗಳು ದೂರವಾಗುವುದು. ಮನೆಯಲ್ಲಿ ದೇವತಾ ಕಾರ್ಯಗಳನ್ನು ನೆರವೇರಿಸುವಿರಿ. ಒತ್ತಡ ದೂರವಾಗಿ ಮನಃಶಾಂತಿ ಲಭಿಸುವುದು. ಧಾರ್ಮಿಕ ಕಾರ್ಯ ನಿಮಿತ್ತ ದೂರದ ಊರಿಗೆ ಪ್ರವಾಸ  ಹೋಗುವಿರಿ.

125

ಮೀನ ರಾಶಿಯವರಿಗೆ ಗುರು ವ್ಯಯ ಭಾವವಾದ ದ್ವಾದಶ ಭಾವದಲ್ಲಿ ಸಂಚಾರ ಮಾಡುವನು. ಮಾಡುವ ಕೆಲಸ ಕಾರ್ಯಗಳಿಗೆ ವಿಘ್ನಗಳು ಎದುರಾಗುವುದು. ಮನೆಯಲ್ಲಿ ಶುಭಕಾರ್ಯಗಳು ನೆರವೇರುವುದಾದರೂ ಅಧಿಕ ಧನವ್ಯಯವಾಗುವುದು. ಸುಖಭೋಗಕ್ಕೋಸ್ಕರ ಅಧಿಕ  ಧನ ವ್ಯಯ ಮಾಡುವಿರಿ. ಶತೃಗಳು ಮಿತ್ರರಾಗುವರು. ದೀರ್ಘ  ಕಾಲದ ಅನಾರೋಗ್ಯ ಸಮಸ್ಯೆಗಳು  ದೂರವಾಗುವುದು. ಮಾನಸಿಕ ತೃಪ್ತಿಗಾಗಿ ತೀರ್ಥಕ್ಷೇತ್ರಗಳಿಗೆ ಪ್ರವಾಸ ಹೋಗುವಿರಿ.

6877

98852