ನಿತ್ಯ ಪಂಚಾಂಗ

ಹಣೆಯ ರೇಖೆಯ ಲಕ್ಷಣಗಳು

    ವಿಶಾಲವಾದ ಹಣೆಯಲ್ಲಿ ಅಡ್ಡವಾಗಿ ಅಥವಾ ಉದ್ದುದ್ದವಾಗಿ ಗೆರೆಗಳು ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ಬಾಲ್ಯದಿಂದಲೇ ಗೆರೆಗಳಿದ್ದರೆ ಸಾಮಾನ್ಯವಾಗಿ ನಲವತ್ತು ವಯಸ್ಸಿನ ನಂತರದಲ್ಲಿ ಗೆರೆಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಅವುಗಳ ಲಕ್ಷಣ ವಿಶೇಷಗಳನ್ನು  ಈ  ರೀತಿ ವಿಶ್ಲೇಷಿಸಿದ್ದಾರೆ.

  • ಹಣೆಯಲ್ಲಿ ರೇಖೆಗಳೇ ಇಲ್ಲದಿರುವವರು ದೀರ್ಘಯುವಾಗಿ ಎಂಬತ್ತಕ್ಕಿಂತ ಹೆಚ್ಚು ವರ್ಷ ಬದುಕುತ್ತಾರೆ.

  • ಹಣೆಯಲ್ಲಿ ಕೂದಲುಗಳವರೆಗೆ ಅಡ್ಡರೇಖೆಗಳಿರುವವರು ದೀರ್ಘಾಯುಷ್ಯ ಉಳ್ಳವರು, ಚಿಂತಾಗ್ರಸ್ತರಾಗಿರುವರು .

  • ಹಣೆಯಲ್ಲಿ ಮೂರು ರೇಖೆಗಳನ್ನು ಹೊಂದಿದವರು ಶತಾಯುವೆನಿಸುವರು.

  • ಹಣೆಯಲ್ಲಿ ನಾಲ್ಕು ಅಥವಾ ಹೆಚ್ಚು ರೇಖೆಗಳಿರುವವರು ರಾಜಯೋಗವನ್ನು ಅನುಭವಿಸುತ್ತ 90 ವರ್ಷ ಗಳಿಗಿಂತಲೂ ಹೆಚ್ಚು ವರ್ಷ ಬದುಕುವರು, ಸುಖಿಯಾಗಿ ಇರುವರು.

  • ಹಣೆಯಲ್ಲಿ ಕತ್ತರಿಸಿದಂತೆ ರೇಖೆಗಳಿರುವವರು ಕಾಮಾಸಕ್ತಿ ಹೊಂದಿದವರು, ಪರಸ್ತ್ರೀ ಆಸಕ್ತರೂ ಆಗುವರು.

  • ಹಣೆಯಲ್ಲಿ  ಅನೇಕ  ಗೆರೆಗಳಿರುವವರು ಎಪ್ಪತ್ತು  ವರ್ಷ ಆಯಷ್ಯ  ಹೊಂದಿರುವರು.

  • ಎರಡನೆಯ ಅಡ್ಡರೇಖೆಯು ಹಣೆಯಲ್ಲಿ ಉದ್ದವಾಗಿ ಕಾಣಿಸಿದರೆ ಅರುವತ್ತು ವರ್ಷ ಆಯುಷ್ಯ ಹೊಂದುವರು.

  • ಹಣೆಯಲ್ಲಿ  ವಕ್ರರೇಖೆಗಳಿರುವವರು  ಐವತ್ತು ವರ್ಷಗಳವರೆಗೆ  ಬದುಕುವರು.

  • ಹಣೆಯಲ್ಲಿ ಚಿಕ್ಕ ಚಿಕ್ಕ ರೇಖೆಗಳಿರುವವರು ಅಲ್ಪಾಯುವೆನಿಸಿ ನಲುವತ್ತು ವರ್ಷಗಳವರೆಗೆ ಬದುಕುವರು.

  • ಹಣೆಯಲ್ಲಿ ತ್ರಿಶೂಲಾಕೃತಿಯುಳ್ಳವರು ಸಂಪನ್ನನೆನಿಸಿ ಸಮರ್ಥನಾಯಕರಾಗಿ ದಕ್ಷ ಮತ್ತು ಶ್ರೀಮಂತರಾಗುವರು.

  • ಹಣೆಯಲ್ಲಿ ತಿಲಕದಂತೆ ಸ್ವತಃ ರಚನೆಯಾಗುತ್ತಿದ್ದರೆ ಸಮಾಜದ  ಗೌರವಕ್ಕೆ  ಪಾತ್ರರಾಗುವರು.

  • ಹಣೆಯಲ್ಲಿ ಸದಾ ರೇಖೆಗಳು ಕಾಣುವಂತಿದ್ದರೆ ಚಿಂತಾಗ್ರಸ್ತರಾಗುವರು.45689