ಜ್ಯೋತಿಷ ಶಾಸ್ತ್ರದ ಮಹತ್ವ ಮತ್ತು ಜ್ಯೋತಿಷ ಶಾಸ್ತ್ರವನ್ನು ಏಕೆ ಕಲಿಯಬೇಕು.

“ವೇದೋsಖಿಲೋ ಧರ್ಮಮೂಲಮ್”(ಮನುಸ್ಮೃತಿ) ಎನ್ನುವಂತೆ ಭಾರತೀಯ ಸಂಸ್ಕೃತಿಯ ಮೂಲಾಧಾರವೇ ವೇದಗಳು. ವೇದಪುರುಷನ ಮುಖ ವ್ಯಾಕರಣವಾದರೆ, ಜ್ಯೋತಿಷವು ಆತನ ಕಣ್ಣಾಗಿದೆ. “ ವೇದಸ್ಯ ಚಕುಃ ಕಿಲ ಶಾಸ್ತ್ರಮೇತತ್”. ಸುಂದರನಾದರೂ ಕಣ್ಣಿಲ್ಲದೇ ಒಬ್ಬ ಸಂಪೂರ್ಣ ಪುರುಷನಾಗಲಾರ, ಹಾಗೆಯೇ ಬೇರೆ ಶಾಸ್ತ್ರಗಳ ಅಧ್ಯಯನ ಮಾಡಿದ್ದರೂ ಜ್ಯೋತಿಷ ಜ್ಞಾನವಿಲ್ಲದಿದ್ದರೆ ಜ್ಞಾನ ಪರಿಪೂರ್ಣವಾಗಲಾರದು.
ಜ್ಯೋತಿಷ್ಯ ಜ್ಞಾನದ ಮಹಾಫಲವನ್ನು ಗರ್ಗಸಂಹಿತೆಯಲ್ಲಿ ಹೀಗೆ ಹೇಳಲಾಗಿದೆ –
ಜ್ಯೋತಿಶ್ಚಕ್ರೇ ತು ಲೋಕಸ್ಯ ಸರ್ವಸ್ಯೋಕ್ತಂ ಶುಭಾಶುಭಂ | ಜ್ಯೋತಿರ್ಜ್ಞಾನಂ ತು ಯೋ ವೇದ ಸ ಯಾತಿ ಪರಮಾಂ ಗತಿಮ್ ||
ಗ್ರಹ, ನಕ್ಷತ್ರ, ತಾರಾಸಮೂಹ, ರಾಶಿಚಕ್ರಗಳಿಂದ ಲೋಕದ ಎಲ್ಲರ ಶುಭಾಶುಭ ಫಲಗಳನ್ನು ಹೇಳಲಾಗುತ್ತದೆ, ಆದ್ದರಿಂದ ಅಂತಹ ಬೆಳಕಿನ ಶಾಸ್ತ್ರವಾದ ಜ್ಯೋತಿಷ್ಯದ ಜ್ಞಾನವನ್ನು ಯಾರು ಹೊಂದಿರುವರೋ ಅವರು ಪರಮಗತಿಯಾದ ಮೋಕ್ಷವನ್ನು ಹೊಂದುತ್ತಾರೆ.

ಮಾನವ ಜನ್ಮ ಕೇವಲ ಉಂಡುಟ್ಟು ರಮಿಸಿ ನಶಿಸಲಲ್ಲಾ, ಬದಲಿಗೆ ʻಮಾನವ ಜನ್ಮ ದೋಡ್ಡದು ಹಾಳುಮಾಡಲು ಬೇಡಿರೋ ಹುಚ್ಚಪ್ಪಗಳಿರಾʼ ಎಂದು ಅನುಭವಿಕರ ಶ್ರೇಷ್ಠನುಡಿಯಿದು. ಕಾರಣ ಕ್ರಿಮಿಕೀಟಾದಿ 84 ಲಕ್ಷ ಜನನೇಂದ್ರೀಯಗಳಲ್ಲಿ ಜನಿಸಿದನಂತರ ಈ ಮಾನವ ಜನ್ಮದೊರೆತಿದೆಯಂದು ನಮ್ಮ ಋಷಿಮುನಿಗಳ ಸಂಶೋಧನೆ. ಆದ್ದರಿಂದ ಮಾನವ ಜನ್ಮವನ್ನು ಸಾರ್ಥಕಮಾಡಿಕೊಳ್ಳುವುದು ಅವಶ್ಯಕವಾಗಿದೆ, ಅದರಲ್ಲೂ ಭಾರತದೇಶದಲ್ಲಿ ಹುಟ್ಟುವುದು ಅವನ ವಿಶೇಷ ಪುಣ್ಯಫಲದಿಂದ. ಭೂಮಿಯಲ್ಲಿ ಜನಿಸಿದ ನಂತರ “ಸಂಚಿತ ಪ್ರಾರಬ್ಧ ಆಗಾಮಿ” ಕರ್ಮಗಳನ್ನು ಅನುಭವಿಸಬೇಕು. ಈ ಕರ್ಮಗಳ ಮೇಲೆ ಜ್ಯೋತಿಷ್ಯಾಸ್ತ್ರವು ಬೆಳಕನ್ನು ಚೆಲ್ಲುತ್ತದೆ, ಮುಂಬರುವ ಕಷ್ಟನಷ್ಟಾದಿಗಳನ್ನು ಶಾಸ್ತ್ರದ ಮೂಲಕ ತಿಳಿದು ಉಪಾಯಗಳನ್ನು ಸಿದ್ಧಪಡಿಸಬಹುದು, ಇದರ ಮೂಲಕ ಮನಃ ಶಾಂತಿಯನ್ನು ಪಡೆಯಬಹುದಾಗಿದೆ. ಆದ್ದರಿಂದ ಜ್ಯೋತಿಷ್ಯಾಸ್ತ್ರದ ಅವಶ್ಯಕತೆ ಪ್ರತಿ ಜೀವಿಗೂ ಅಮೂಲ್ಯ ವರದಾನವಾಗಬಲ್ಲದು.ಇದೊಂದು ದೈವೀಕ ವಿಜ್ಞಾನಶಾಸ್ತ್ರವಾಗಿರದೇ ಗಣಿತಾಧಾರಿತ ಶಾಸ್ತ್ರವೆಂದು ಸ್ಪಷ್ಟಿಕರಿಸಬಹುದು.
ಪ್ರತಿಮನೆಯಲ್ಲಿ ಒಬ್ಬ ಜ್ಯೋತಿಷಿ ಇರಬೇಕೆಂಬ ಸದುದ್ದೇಶದಿಂದ “ಜ್ಯೋತಿಷ ಮಿತ್ರ ಆನ್ಲೈನ್ ದಿನಪತ್ರಿಕೆ”ಯು “ ಡಿಜಿಟಲ್ ಜ್ಯೋತಿಷ ತರಬೇತಿ ”ಯನ್ನು (Asynchronous E –Learning System) ನೀಡುತ್ತಿದೆ. ಶುಲ್ಕದ ಮೇಲೆ ವಿಶೇಷ ರಿಯಾಯಿತಿಯೂ ಇದೆ. ಕಲಿಕಾಸಕ್ತರು 9986671473 ಸಂಖ್ಯೆಗೆ ಕರೆಮಾಡಿ ರಿಜಿಸ್ಟ್ರೇಷನ್ ಮಾಡಬಹುದಾಗಿದೆ. ( ನಮ್ಮ ವೆಬ್ಸೈಟ್ www.jyothishamithra.com ನಲ್ಲೂ ರಿಜಿಸ್ಟ್ರೇಷನ ಮಾಡಬಹುದಾಗಿದೆ.)

