ನಿತ್ಯ ಪಂಚಾಂಗ

ಕುಜ ಗೋಚಾರ ಫಲ

6522

ಮೇಷ ರಾಶಿ : ವಾಹನ/ಭೂಮಿ/ಗೃಹ/ಚಿನ್ನಾಭರಣ ಖರೀದಿಸುವಿರಿ. ಕುಟುಂಬ-ಹಣಕಾಸು ವಿಚಾರದಲ್ಲಿ ಎಚ್ಚರವಿರಲಿ. ಕಡ್ಡಿ ಮುರಿದಂತೆ ಮಾತನಾಡಿ ಕಷ್ಟನಷ್ಟಕ್ಕೊಳಗಾಗುವಿರಿ. ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಹೋಗುವಿರಿ.

ಪರಿಹಾರ : ಕುಜ ಬೀಜಮಂತ್ರ ಪಠಣೆ. ಸುಬ್ರಹ್ಮಣ್ಯ ಕ್ಷೇತ್ರ ದರ್ಶನ.

ವೃಷಭ ರಾಶಿ : ಹೊಸ ವ್ಯಾಪಾರ-ವ್ಯವಹಾರ ಮಾಡಲು ಪ್ರಯತ್ನಿಸುವಿರಿ ಆದರೆ ಇದು ಸಕಾಲವಲ್ಲ. ಕೋಪಾವೇಶಕ್ಕೆ ಒಳಗಾಗುವಿರಿ. ದೂರದ ಊರಿಗೆ ಪ್ರವಾಸ ಹೋಗುವಿರಿ. ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ.

ಪರಿಹಾರ : ಶುಕ್ರ ಬೀಜಮಂತ್ರ ಪಠಣೆ. ದುರ್ಗಾಪರಮೇಶ್ವರಿ ಕ್ಷೇತ್ರ ದರ್ಶನ.

486

ಮಿಥುನ ರಾಶಿ : ಶತ್ರುಗಳು ನಾಶವಾಗುವರು. ಲಾಭಕ್ಕಿಂತ ನಷ್ಟ ಹೆಚ್ಚಾಗುವುದು. ವಿವಾಹವಾಗಲು ಇದು ಸಕಾಲವಲ್ಲ. ವ್ಯಾಪಾರ-ವ್ಯವಹಾರ ಮಾಡುವವರು ಆದಷ್ಟು ಎಚ್ಚರದಿಂದಿರಬೇಕು.

ಪರಿಹಾರ : ಬುಧ ಬೀಜಮಂತ್ರ ಪಠಣೆ. ಶ್ರೀರಾಮ ದೇವರ ಆರಾಧನೆ.

ಕರ್ಕಾಟಕ ರಾಶಿ : ಭೂಮಿ ಲಾಭವಾಗುವುದು. ಮಾಡುತ್ತಿರುವ ವೃತ್ತಿಯಲ್ಲಿ ಧನಾತ್ಮಕ ಬದಲಾವಣೆಯಾಗುವುದು. ಸಂತಾನ ಇಲ್ಲದವರಿಗೆ ಸಂತಾನವಾಗುವುದು. ಆಕಸ್ಮಿಕವಾಗಿ ಧನವ್ಯಯವಾಗುವುದು.

ಪರಿಹಾರ : ಚಂದ್ರ ಬೀಜಮಂತ್ರ ಪಠಣೆ. ದುರ್ಗಾಪರಮೇಶ್ವರಿ ಕ್ಷೇತ್ರ ದರ್ಶನ.

ಸಿಂಹ ರಾಶಿ : ಗೃಹ/ಭೂಮಿ/ವಾಹನ/ಚಿನ್ನಾಭರಣ ಖರೀದಿಸುವಿರಿ. ಮಾಡುತ್ತಿರುವ ಕೆಲಸಕಾರ್ಯಗಳಿಗೆ ವಿಘ್ನ ಎದುರಾಗುವುದು. ಉಷ್ಣಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಯಿಂದ ಬಳಲುವಿರಿ.

ಪರಿಹಾರ : ರವಿ ಬೀಜಮಂತ್ರ ಜಪ. ಸುಬ್ರಹ್ಮಣ್ಯ ಕ್ಷೇತ್ರ ದರ್ಶನ.

999

ಕನ್ಯಾ ರಾಶಿ : ದೇವತಾ ಕಾರ್ಯಗಳಿಗೆ ವಿಘ್ನಗಳು ಎದುರಾಗುವುದು. ತಂದೆಯ ಆರೋಗ್ಯದಲ್ಲಿ ಸಣ್ನಪುಟ್ಟ ಸಮಸ್ಯೆಗಳು ಉಂಟಾಗುವುದು. ಗೃಹ/ಭೂಮಿ/ವಾಹನ ಖರೀದಿಸಲು ಇದು ಸಕಾಲವಲ್ಲ.

ಪರಿಹಾರ : ಬುಧ ಬೀಜಮಂತ್ರ ಪಠಣೆ. ಶ್ರೀರಾಮ ದೇವರ ಆರಾಧನೆ.

ತುಲಾರಾಶಿ : ಶತ್ರುಗಳು ನಿಮ್ಮಿಂದ ದೂರವಾಗುವರು. ಶೇರು /ಜೂಜಿನಲ್ಲಿ ಹಣ ತೊಡಗಿಸಲು ಮನಸ್ಸಾಗುವುದು. ವಿವಾಹವಾಗಲು ಇದು ಸಕಾಲವಲ್ಲ. ಕಡ್ಡಿ ಮುರಿದಂತೆ ಮಾತನಾಡಿ ಕಷ್ಟನಷ್ಟಕ್ಕೊಳಗಾಗುವಿರಿ.

ಪರಿಹಾರ : ಶುಕ್ರ ಬೀಜಮಂತ್ರ ಪಠಣೆ. ದುರ್ಗಾಪರಮೇಶ್ವರಿ ಕ್ಷೇತ್ರ ದರ್ಶನ.

ವೃಶ್ಚಿಕ ರಾಶಿ : ಮೋಜು-ಮಸ್ತಿನಲ್ಲಿ ಸಮಯ ಕಳೆಯುವಿರಿ. ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಹೋಗುವಿರಿ. ಮಿತ್ರರು ನಿಮ್ಮಿಂದ ದೂರವಾಗುವರು. ದುಡುಕುತನದಿಂದ ವರ್ತಿಸುವಿರಿ.

ಪರಿಹಾರ : ಕುಜ ಬೀಜಮಂತ್ರ ಪಠಣೆ. ಸುಬ್ರಹ್ಮಣ್ಯ ಕ್ಷೇತ್ರ ದರ್ಶನ.

9655

ಧನು ರಾಶಿ : ಮಾನಸಿಕ ನೆಮ್ಮದಿ ಕಡಿಮೆಯಾಗುವುದು. ವಿನಾ ಕಾರಣ ಕೋಪಗೊಳ್ಳುವಿರಿ. ಅಶುಭ ಕಾರ್ಯಗಳಿಗೆ ಅಧಿಕ ಧನವ್ಯಯವಾಗುವುದು. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಗಮನಕೊಡಿ.

ಪರಿಹಾರ : ಗುರು ಬೀಜಮಂತ್ರ ಪಠಣೆ. ಶಿರ್ಡಿಸಾಯಿಬಾಬಾ ಕ್ಷೇತ್ರ ದರ್ಶನ.

ಮಕರ ರಾಶಿ : ಗೃಹ/ಭೂಮಿ/ವಾಹನ/ಚಿನ್ನಾಭರಣ ಖರೀದಿಸುವಿರಿ. ಮಕ್ಕಳಿಂದ ಲಾಭವಾಗುವುದು. ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ಆರೋಗ್ಯದ ಬಗ್ಗೆ ಗಮನಕೊಡಿ.

ಪರಿಹಾರ : ಶನಿ ಬೀಜಮಂತ್ರ ಪಠಣೆ. ಆಂಜನೇಯಸ್ವಾಮಿ  ಕ್ಷೇತ್ರ ದರ್ಶನ.

ಕುಂಭ ರಾಶಿ : ಮಾಡುತ್ತಿರುವ ವೃತ್ತಿಯಲ್ಲಿ ಧನಾತ್ಮಕ ಬದಲಾವಣೆಯಾಗುವುದು. ಭೂಮಿ ಲಾಭವಾಗುವುದು. ವಿವಾಹವಾಗಲು ಪ್ರಯತ್ನಿಸುತ್ತಿರುವವರಿಗೆ ಇದು ಸಕಾಲವಲ್ಲ. ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಗಮನಕೊಡಿ.

ಪರಿಹಾರ : ಶನಿ ಬೀಜಮಂತ್ರ ಪಠಣೆ. ಅಯ್ಯಪ್ಪಸ್ವಾಮಿ ಕ್ಷೇತ್ರ ದರ್ಶನ.

ಮೀನ ರಾಶಿ : ವಿಪರೀತ ಧೈರ್ಯವಂತರಾಗುವಿರಿ. ಶತ್ರುಗಳು ನಿಮ್ಮಿಂದ ದೂರವಾಗುವರು. ಮಾಡುತ್ತಿರುವ ವೃತ್ತಿಯಲ್ಲಿ ವಿಘ್ನಗಳು ಉಂಟಾಗುವುದು. ರಾಜಕಾರಣಿಗಳಿಗೆ ಹಿನ್ನಡೆಯಾಗುವುದು.

ಪರಿಹಾರ : ಗುರು ಬೀಜಮಂತ್ರ ಪಠಣೆ. ರಾಘವೇಂದ್ರಸ್ವಾಮಿ  ಕ್ಷೇತ್ರ ದರ್ಶನ.

5566