ನಿತ್ಯ ಪಂಚಾಂಗ

ಮಕರ ಸಂಕ್ರಾಂತಿ ಭವಿಷ್ಯ

555555555

ಮೇಷ ರಾಶಿ : ಕೈ ಹಾಕಿದ ಸಕಲ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುದು. ಕುಟುಂಬದಲ್ಲಿ ದೈವಿಕ ಕಾರ್ಯಗಳು ನೆರವೇರುವುದು. ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಹೋಗುವಿರಿ. ಸಂತಾನ ಇಲ್ಲದವರಿಗೆ ಸಂತಾನಯೋಗ ಕೂಡಿಬರುವುದು. ತಂದೆಯಿಂದ ಲಾಭವಾಗುವುದು. ಸಾಮಾಜಿಕವಾಗಿ ನಿಮ್ಮನ್ನು ನೀವು ಗುರುತಿಸಿಕೊಳ್ಳುವಿರಿ.

ವೃಷಭ ರಾಶಿ : ಐಷಾರಾಮಿ ಸಾಮಾಗ್ರಿಗಳನ್ನು ಖರೀದಿಸುವಿರಿ. ವಾಹನ / ಭೂಮಿ / ಮನೆ ಖರೀದಿಗೆ ಇದು ಸಕಾಲವಾಗಿದೆ. ತಾಯಿಯಿಂದ ಲಾಭವಾಗುವುದು. ಮನೆಯವರಲ್ಲಿದ್ದಂತಹ  ಅಸಮಾಧಾನ ದೂರ ವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವುದು.

ಮಿಥುನ ರಾಶಿ : ವಿಪರೀತ ಧೈರ್ಯವಂತರಾಗುವಿರಿ, ಶಿವನ ಆರಾಧನೆಯಿಂದ ವಿಶೇಷವಾದ ಲಾಭವಾಗುವುದು. ತಂದೆಯ ಆರೋಗ್ಯದಲ್ಲಿ ಏರುಪೇರಾಗುವುದು. ದೇವತಾ ಕಾರ್ಯಗಳನ್ನು ನೆರವೇರಿಸುವಾಗ ವಿಘ್ನಗಳು ನೆರವೇರುವುದು. ಸಹೋದರ / ಸಹೋದರಿಗೋಸ್ಕರ  ಧನವ್ಯಯವಾಗುವುದು.

99999

ಕರ್ಕಾಟಕ ರಾಶಿ : ಧನಲಾಭವಾಗುವುದು. ಹೊಸ ವ್ಯಾಪಾರ / ವ್ಯವಹಾರ ಆರಂಭಿಸಲು ಇದು ಸಕಾಲವಾಗಿದೆ. ವಿವಾಹಕ್ಕೆ ಪ್ರಯತ್ನಿಸುವವರಿಗೆ ವಿಘ್ನಗಳು ಎದುರಾಗುವುದು. ತಂದೆಯಿಂದ ಲಾಭವಾಗುವುದು. ಕಡ್ಡಿ ಮುರಿದಂತೆ   ಮಾತನಾಡಿ   ಕಷ್ಟನಷ್ಟಕ್ಕೊಳಗಾಗುವಿರಿ.

ಸಿಂಹ ರಾಶಿ : ಶತ್ರುಗಳು ನಿಮ್ಮಿಂದ ದೂರವಾಗುವರು ಆದರೆ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆಗಳು ಬಾಧಿಸುವುದು. ಹೊಸ ವ್ಯಾಪಾರ/ವ್ಯವಹಾರ ಆರಂಭಿಸಲು ಇದು ಸಕಾಲವಲ್ಲ. ಆಕಸ್ಮಿಕವಾಗಿ ಖರ್ಚುವೆಚ್ಚಗಳು ಎದುರಾಗುವುದು. ತಂದೆಯ ಆರೋಗ್ಯದ ಕಡೆ ಗಮನಕೊಡಿ.

ಕನ್ಯಾ ರಾಶಿ : ಧಾರ್ಮಿಕ ಕಾರ್ಯಗಳಲ್ಲಿ ವಿಶೇಷವಾದ ಆಸಕ್ತಿ ಉಂಟಾಗುವುದು. ರಹಸ್ಯ ವಿದ್ಯೆಗಳನ್ನು ಕಲಿಯಬಯಸುವಿರಿ. ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಯಿಂದ ಬಳಲುವಿರಿ. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಗಮನಕೊಡಿ. ಸರ್ಕಾರ ಅಥವಾ ರಾಜಕಾರಣಿಗಳಿಂದ   ಲಾಭವಾಗುವುದು.

3658

ತುಲಾ ರಾಶಿ : ಭೂಮಿ / ಮನೆ / ವಾಹನ / ಚಿನ್ನಾಭರಣ ಖರೀದಿಸುವಿರಿ. ಪಿತ್ರಾರ್ಜಿತ ಆಸ್ತಿ ಲಭಿಸುವುದು. ವಿದ್ಯಾರ್ಥಿಗಳಿಗೆ ಅಧಿಕ ಅಂಕ ಲಭಿಸುವುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ವಿಶೇಷವಾದ ಲಾಭವಾಗುವುದು. ಮನೆಯಲ್ಲಿ   ಶುಭಕಾರ್ಯಗಳು   ನೆರವೇರುವುದು.

ವೃಶ್ಚಿಕ ರಾಶಿ : ವಿಪರೀತ ಧೈರ್ಯವಂತರಾಗುವಿರಿ. ಶತ್ರುಗಳು ದೂರವಾಗುವರು. ಮಾಡುತ್ತಿರುವ ವೃತ್ತಿಯಲ್ಲಿ ಸಣ್ಣಪುಟ್ಟ ಅಸಮಾಧಾನ ಉಂಟಾಗುವುದು. ಗಂಟಲಿನ ಭಾಗದಲ್ಲಿ ಅನಾರೋಗ್ಯ ಸಮಸ್ಯೆ ಉಂಟಾಗುವುದು. ದೂರದ   ಊರಿಗೆ   ಪ್ರವಾಸ   ಹೋಗುವಿರಿ.

ಧನು ರಾಶಿ : ಭಾಗ್ಯೋದಯವಾಗುವುದು. ತಂದೆಯಿಂದ ಧನಲಾಭವಾಗುವುದು. ಕಡ್ಡಿಮುರಿದಂತೆ ಮಾತನಾಡಿ ಕಷ್ಟನಷ್ಟಕ್ಕೊಳಗಾಗುವಿರಿ. ಉಷ್ಣಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಉಂಟಾಗುವುದು. ಆಕಸ್ಮಿಕವಾಗಿ ಧನವ್ಯಯವಾಗುವುದು.

8889252

ಮಕರ ರಾಶಿ : ರಾಜಕಾರಣಿ ಅಥವಾ ಸರ್ಕಾರದಿಂದ ಲಾಭವಾಗುವುದು. ಮುಂಗೋಪಿಗಳಂತೆ ವರ್ತಿಸುವಿರಿ. ನಾನು ನನ್ನದು ಎಂಬ ಅಹಂ ಸ್ವಭಾವವಿರುವುದು. ವಿವಾಹವಾಗಲು ಪ್ರಯತ್ನಿಸುತ್ತಿರುವವರಿಗೆ ವಿಘ್ನಗಳು ಎದುರಾಗುವುದು. ಹೊಸ ವ್ಯಾಪಾರ / ವ್ಯವಹಾರ ಆರಂಭಿಸಲು   ಇದು   ಸಕಾಲವಲ್ಲ.

ಕುಂಭ ರಾಶಿ : ದೂರದ ಊರಿಗೆ ಪ್ರವಾಸ ಹೋಗುವಿರಿ. ಬಾಳಸಂಗಾತಿಯೊಂದಿಗೆ ಭಿನಾಭಿಪ್ರಾಯ ಉಂಟಾಗುವುದು. ವಿವಾಹವಾಗಲು ಪ್ರಯತ್ನಿಸುತ್ತಿರು ವವರಿಗೆ ವಿಘ್ನಗಳು ಎದುರಾಗುವುದು. ತಂದೆಯ ಆರೋಗ್ಯದ   ಬಗ್ಗೆ   ಗಮನ   ಕೊಡಿ.

ಮೀನ ರಾಶಿ : ಶತ್ರುಗಳಿಂದ ಲಾಭವಾಗುವುದು. ಅನಾರೋಗ್ಯ ಸಮಸ್ಯೆ ದೂರವಾಗುವುದು. ರಾಜಕಾರಣಿಗಳಿಂದ – ಸರ್ಕಾರದಿಂದ ಲಾಭವಾಗುವುದು. ಮುಖದಲ್ಲಿ ತೇಜಸ್ಸು ಮೂಡುವುದು. ಸರ್ಕಾರಿ ಕೆಲಸಕ್ಕೆ ಪ್ರಯತ್ನಿಸುತ್ತಿರುವವರಿಗೆ ಇದು ಸಕಾಲವಾಗಿದೆ.

 ಡಿಜಿಟಲ್ ಜ್ಯೋತಿಷ  ಕ್ಲಾಸ್  ಡೆಮೋ  https://youtu.be/Qfr8ksggdVg

5555552221