ನಿತ್ಯ ಪಂಚಾಂಗ

ಪಿತೃಪಕ್ಷ - 2022

777777

 ಬಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮಹಾಲಯದ 15 ದಿನಗಳು ಪಿತೃ ಪಕ್ಷವಾಗಿದ್ದು, ಶ್ರಾದ್ದಾ ವಿಧಿಗಳಿಗೆ ದಿನಗಳು ಪ್ರಶಸ್ತವಾಗಿದೆ. ವರ್ಷ  ಪಿತೃ ಪಕ್ಷವನ್ನು ಸೆಪ್ಟೆಂಬರ್ 11 ರಿಂದ ಸೆಪ್ಟೆಂಬರ್ 25ರವರೆಗೆ ಆಚರಿಸಲಾಗುತ್ತದೆ.

15874

ಪಿತೃಕಾರ್ಯ ಎನ್ನುವುದು ದೇವಕಾರ್ಯಕ್ಕಿಂತಲೂ ಮಿಗಿಲು.   ಪಿತೃ ಋಣದ ಮೂಲಕ ದೇವಋಣ ಮತ್ತು ಋಷಿಋಣ ಎರಡನ್ನೂ ಪೂರೈಸುವ ಅಪೂರ್ವ ಅವಕಾಶ. ಹೆತ್ತವರು ಸ್ವರ್ಗದಲ್ಲಿ ನೆಮ್ಮದಿಯಾಗಿರಲಿ ಎನ್ನುವ ದೊಡ್ಡ ಆಶಯದೊಂದಿಗೆ ನಡೆಸುವ ಧಾರ್ಮಿಕ ವಿಧಿಯಾದರೆ, ವ್ಯಕ್ತಿಯೊಬ್ಬ ಮರಣಾನಂತರವೂ ತನ್ನ ಮಕ್ಕಳ ಮೇಲೆ ಪ್ರಭಾವ ಬೀರುತ್ತಲೇ ಇರುತ್ತಾನೆ ಅಥವಾ ಮಕ್ಕಳು ಆತನ ಪ್ರಭಾವವನ್ನು, ನೆನಪನ್ನು ಉಳಿಸಿಕೊಳ್ಳುವ ಪ್ರಯತ್ನ ವೈಚಾರಿಕನೆಲೆಯದ್ದು.

8888

ಪಿತೃ ಪಕ್ಷ ಶುಭವೋ ಅಶುಭವೋ…, ಹೆಚ್ಚಿನವರು ಪಿತೃಪಕ್ಷದ 15 ದಿನ ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ. ಆದರೆ   15 ದಿನಗಳು ಅಶುಭಕಾರಕವೇನೂ ಅಲ್ಲ. ಏಕೆಂದರೆ   ನಮ್ಮನ್ನು ಸಾಕಿ ಬೆಳೆಸಿ ನಮಗೆ ಮಾರ್ಗದರ್ಶನ ನೀಡಿ, ನಮ್ಮನ್ನು ಬಿಟ್ಟು ಅಗಲಿದ ಆತ್ಮಗಳನ್ನು ತೃಪ್ತಿ ಪಡಿಸುವುದು ಒಂದು ಒಳ್ಳೆಯ ಕೆಲಸ. ವೈದಿಕರು ಪಿತೃಪಕ್ಷದಂದು ತಮ್ಮ ಪಿತೃಗಳಿಗೆ ಶ್ರದ್ಧಾ ಭಕ್ತಿಯಿಂದ ಪಿತೃತರ್ಪಣ ನೀಡುತ್ತಾರೆ.

455698 ಹಿಂದೂ ಧರ್ಮದಲ್ಲಿ ಪ್ರತಿಅಮವಾಸ್ಯೆಯಂದು ಪಿತೃತರ್ಪಣ ಮಾಡುವ ಕ್ರಮವಿದೆ. ಆದರೆ ಭಾದ್ರಪದ ಕೃಷ್ಣಪಕ್ಷದಲ್ಲಿ ಬರುವ ಅಮವಾಸ್ಯೆ ಪಿತೃ ದೇವತೆಗಳಿಗೆ ಪರಮ ಪುಣ್ಯದಿನ.ಇದನ್ನೇ ಮಹಾಲಯಅಮವಾಸ್ಯೆ ಎಂದು ಕರೆಯುತ್ತಾರೆ. ತಮ್ಮ ಪಿತೃಗಳಿಗೆ ನಿಶ್ಚಿತ ತಿಥಿಯಂದು ತರ್ಪಣ ಮಾಡಲು ಸಾಧ್ಯವಾಗದಿದ್ದರೆ, ಅಂತಹವರು ಮಹಾಲಯ ಅಮವಾಸ್ಯೆಯ ದಿನ ಪಿತೃ ತರ್ಪಣ ನೀಡಬಹುದು.

9999

ಪಾಲಿಸಬೇಕಾದ ನಿಯಮಗಳು :

ಪಿತೃಪಕ್ಷದಲ್ಲಿ ಶ್ರಾದ್ಧ ಕರ್ಮವನ್ನು ಮಾಡುವ ಕರ್ತೃವು ಶ್ರಾದ್ಧದ ದಿನದಂದು ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಅದೆಂದರೆ ಕ್ಷೌರ ಕರ್ಮ, ದ್ವಿಭೋಜನ, ಅಭ್ಯಂಜನ ಸ್ನಾನ, ಪರಾನ್ನ ಭೋಜನ, ತಾಂಬೂಲ ಸೇವನೆ ಮಾಡುವಂತಿಲ್ಲ. ಮುಖ್ಯವಾಗಿ ಶ್ರಾದ್ಧದ ಹಿಂದಿನ ದಿನ ಹಾಗೂ ಶ್ರಾದ್ಧ ಕರ್ಮದ ದಿನ ಬ್ರಹ್ಮಚರ್ಯ ವ್ರತವನ್ನು ಮಾಡಬೇಕು. ದೇವತಾ ಕಾರ್ಯಕ್ಕಿಂತಲೂ ಮಿಗಿಲಾಗಿ ಹೆಚ್ಚು ಶ್ರದ್ಧೆಯಿಂದ ಶ್ರಾದ್ಧ ಕಾರ್ಯಗಳನ್ನು ಮಾಡಬೇಕು ಎನ್ನುತ್ತದೆ ದಾಲ್ಭ್ಯಸ್ಮೃತಿ.

4566

ಶ್ರಾದ್ಧಕಾರ್ಯವನ್ನು ಅಪರಾಹ್ನವೇ ಮಾಡಬೇಕುಪ್ರತ್ಯಕ್ಷ ಬ್ರಾಹ್ಮಣರನ್ನು ಕರೆದು ಅವರಿಗೆ ಅಘ್ರ್ಯಪಾದ್ಯ, ವಸ್ತ್ರಗಳನ್ನಿತ್ತು ಸತ್ಕರಿಸಿ ಉಪಚರಿಸಬೇಕು. ಅನ್ನ, ಪಾಯಸ,   ಭಕ್ಷ್ಯ, ಯಥೋಚಿತ ಕಾಣಿಕೆಗಳಿಂದ ಅವರನ್ನು ಸಂತೃಪ್ತಗೊಳಿಸಬೇಕು. ಒಂದೊಮ್ಮೆ ಯೋಗ್ಯ ಬ್ರಾಹ್ಮಣರು ಸಿಗದಿದ್ದರೆ ದರ್ಭೆಯಲ್ಲಿ ಬ್ರಾಹ್ಮಣರನ್ನು ಆಹ್ವಾನಿಸಿ ಉಪಚರಿಸಬೇಕು. ಯಾವುದೂ ಸಾಧ್ಯವಾಗದ ಪಕ್ಷದಲ್ಲಿ ಗೋಗ್ರಾಸವನ್ನಾದರೂ ನೀಡಬೇಕು ಎನ್ನುತ್ತದೆ ಶ್ರಾದ್ಧಮಂಜರಿ.

777

66666