ಸೆಪ್ಟೆಂಬರ್ 27 ರಂದು ಶುಕ್ರ ಸಿಂಹರಾಶಿಗೆ ಪ್ರವೇಶ ಕೆಲವು ರಾಶಿಯವರಿಗೆ ಲಾಭವೋ ಲಾಭ....!

ಸೆಪ್ಟೆಂಬರ್ 27ರಂದು ಶುಕ್ರನು ಸಿಂಹರಾಶಿಯನ್ನು ಪ್ರವೇಶ ಮಾಡುವನು. ಅಕ್ಟೋಬರ 23ರ ವರೆಗೆ ಸಿಂಹರಾಶಿಯಲ್ಲಿರುವನು. ಸಿಂಹರಾಶಿ ಶುಕ್ರನ ಶತೃರಾಶಿಯಾಗಿದ್ದರೂ ಗುರುಗ್ರಹದ ಶುಭದೃಷ್ಟಿ ಶುಕ್ರನಿಗಿರುವುದರಿಂದ ಶುಭಫಲಗಳು ಲಭಿಸುವುದು.
ಮೇಷರಾಶಿ : ಧನಲಾಭ, ಸಂತಾನ ಪ್ರಾಪ್ತಿ, ದೇವತಾ ಕಾರ್ಯಗಳಿಂದ ಲಾಭ,ಸ್ತ್ರೀ ದೇವತಾ ಆರಾಧನೆಯಿಂದ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಲಭಿಸುವುದು.
ವೃಷಭರಾಶಿ : ಮಾತೃವಿನಿಂದ ಲಾಭ, ವಾಹನ /ಭೂಮಿ /ಗೃಹ/ಚಿನ್ನಾಭರಣ ಖರೀದಿಸುವಿರಿ, ಅನಾರೋಗ್ಯ ಸಮಸ್ಯೆಗಳು ದೂರವಾಗುವವು. ಶತೃಗಳು ಮಿತ್ರರಾಗುವರು.
ಮಿಥುನರಾಶಿ : ಆಕಸ್ಮಿಕವಾಗಿ ಆಸ್ತಿ ಲಾಭವಾಗುವುದು. ಮಕ್ಕಳಿಂದ ಧನಲಾಭ. ಆಧ್ಯಾತ್ಮದಲ್ಲಿ ವಿಶೇಷವಾದ ಆಸಕ್ತಿ ಉಂಟಾಗುವುದು. ಸಹೋದರರಿಗೋಸ್ಕರ ಧನವ್ಯಯ ಆಗುವುದು.

ಕರ್ಕಾಟಕರಾಶಿ : ವಿಪರೀತ ಧನಲಾಭ, ಐಶ್ವರ್ಯಲಾಭ, ಸುಖಭೋಗಕ್ಕೋಸ್ಕರ ಅಧಿಕ ಧನವ್ಯಯ ಮಾಡುವಿರಿ. ಮಾತೃವಿನಿಂದಲೂ ಲಾಭವಾಗುವುದು. ವಾಹನ/ ಚಿನ್ನಾಭರಣ ಖರೀದಿಸುವಿರಿ.
ಸಿಂಹರಾಶಿ : ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು. ಉದ್ಯೋಗ ಮಾಡುವವರಿಗೆ ಬಡ್ತಿ ಸಿಗುವುದು.ರಾಜಕೀಯ ಕ್ಷೇತ್ರದಲ್ಲಿರುವರಿಗೆ ಉನ್ನತ ಸ್ಥಾನಮಾನ ಲಭಿಸುವುದು. ಐಶ್ವರ್ಯ ಲಾಭವಾಗುವುದು.
ಕನ್ಯಾರಾಶಿ :ವಾಹನ, ಭೂಮಿ, ಚಿನ್ನಾಭರಣ ಖರೀದಿಸಲು ಅಧಿಕ ಧನವ್ಯಯವಾಗುವುದು. ಶುಭಕಾರ್ಯದ ನಿಮಿತ್ತ ಪ್ರವಾಸ ಹೋಗುವಿರಿ. ತಂದೆಯ ಆರೋಗ್ಯದಲ್ಲಿ ಏರುಪೇರಾಗುವುದು. ಆಕಸ್ಮಿಕವಾಗಿ ಧನವ್ಯಯ ಆಗುವುದು.

ತುಲಾರಾಶಿ : ಧನಲಾಭ, ಸ್ತ್ರಿಯರಿಂದ ಲಾಭವಾಗುವುದು. ಐಶ್ವರ್ಯ ಲಾಭವಾಗುವುದು, ಅವಿವಾಹಿತರಿಗೆ ವಿವಾಹ ಯೋಗ. ಮನೆಯಲ್ಲಿ ಶುಭಕಾರ್ಯಗಳು ನೆರವೇರುವವು. ವೈವಾಹಿಕ ಸಮಸ್ಯೆಗಳು ದೂರವಾಗುವವು.
ವೃಶ್ಚಿಕರಾಶಿ : ವ್ಯವಹಾರ – ಮಿತ್ರರಿಂದ ಲಾಭ ಆಗುವುದು. ಶತೃಗಳು ಮಿತ್ರರಾಗುವರು. ಉದ್ಯೋಗ ಮಾಡುವರಿಗೆ ಸಣ್ಣಪುಟ್ಟ ಸಮಸ್ಯೆಗಳು ಎದುರಾಗುವುದು. ಐಷಾರಾಮಿ ಸಾಮಾಗ್ರಿಗಳನ್ನು ಖರೀದಿಸುವಿರಿ.
ಧನುರಾಶಿ : ತಂದೆಯಿಂದ ಲಾಭವಾಗುವುದು. ಸ್ತ್ರೀದೇವತಾ ಆರಾಧನೆಯಿಂದ ಲಾಭವಾಗುವುದು. ತಂದೆಗೆ ಅನಾರೋಗ್ಯ ಸಮಸ್ಯೆ ಬಾಧಿಸುವುದು. ಅವಿವಾಹಿತರಿಗೆ ವಿವಾಹಯೋಗ ಕೂಡಿ ಬರುವುದು.

ಮಕರರಾಶಿ: ಧನಲಾಭವಿದ್ದರೂ ಮಾಡುವ ವೃತ್ತಿಯಲ್ಲಿ ಸಮಸ್ಯೆಗಳು ಎದುರಾಗುವುದು. ಮಕ್ಕಳ ಆರೋಗ್ಯ ಏರುಪೇರಾಗುವುದು. ಅನಾರೋಗ್ಯ ಸಮಸ್ಯೆಗಳು ದೂರವಾಗುವವು.
ಕುಂಭರಾಶಿ : ಐಷಾರಾಮಿ ವಸ್ತುಗಳನ್ನು ಖರೀದಿಸುವಿರಿ.ಹೊಸ ವ್ಯವಹಾರವನ್ನು ಆರಂಭಿಸುವಿರಿ. ಶುಭಕಾರ್ಯಗಳಿಗೋಸ್ಕರ ಪ್ರವಾಸ ಹೋಗುವಿರಿ. ಅವಿವಾಹಿತರಿಗೆ ವಿವಾಹಯೋಗ ಕೂಡಿ ಬರುವುದು.
ಮೀನರಾಶಿ : ಸುಖಭೋಗಕ್ಕೋಸ್ಕರ ಅಧಿಕ ಧನವ್ಯಯ ಆಗುವುದು. ಅನಾರೋಗ್ಯ ಸಮಸ್ಯೆಗಳು ದೂರವಾಗುವವು. ವಿವಾಹ ಪ್ರಯತ್ನಕ್ಕೆ ಹಿನ್ನಡೆಯಾಗುವುದು. ಮಾನಸಿಕ ನೆಮ್ಮದಿ ಇರುವುದಿಲ್ಲ.