
ಪ್ರತಿ ಮನೆಯಲ್ಲಿ ಒಬ್ಬ ಜ್ಯೋತಿಷಿ ಇರಬೇಕೆಂಬ "ಜ್ಯೋತಿಷ ಮಿತ್ರ ಸಂಸ್ಥೆಯ" ಮೂಲ ಉದ್ದೇಶ ನಿಧಾನವಾಗಿ ಈಡೇರುತ್ತಿದೆ. ನಮ್ಮ "ಡಿಜಿಟಲ್ ಜ್ಯೋತಿಷ ತರಗತಿ"ಗೆ ಹಾಜರಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದಿನ ವ್ಯವಹಾರಿಕ ದಿನಗಳಲ್ಲಿ ಜ್ಯೋತಿಷ ಶಾಸ್ತ್ರದ ಹೆಸರಲ್ಲಿ ಭಯ ಹುಟ್ಟಿಸಿ, ಮನೋದೌರ್ಬಲ್ಯದ ಮುಖಾಂತರ ಹಣ ಗಳಿಸುವ ದುಸ್ಸಾಹಕ್ಕೆ ಪ್ರಯತ್ನಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಕಾಣಬಹುದು. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜ್ಯೋತಿಷ ಮಿತ್ರ ಸಂಸ್ಥೆಯು “ ಡಿಜಿಟಲ್ ಜ್ಯೋತಿಷ ಕ್ಲಾಸ್” ಆರಂಭಿಸಿದೆ.

ಡಿಜಿಟಲ್ ಕ್ಲಾಸ್ ಭಾರತದಲ್ಲಿ ಅಷ್ಟೊಂದು ಪ್ರಚಲಿತದಲ್ಲಿಲ್ಲ. ಭಾರತದಲ್ಲಿ ಆನ್ಲೈನ್ ಕ್ಲಾಸ್ ಹೆಚ್ಚಾಗಿ ಪ್ರಚಲಿತದಲ್ಲಿದೆ. ಆನ್ಲೈನ್ ಕ್ಲಾಸ್ ನಲ್ಲಿ ಲೈವ್ ಗೆ ಬರುವ ಅವಶ್ಯಕತೆ ಇರುತ್ತದೆ ಮತ್ತು ತರಗತಿ ಸರಿಯಾಗಿ ಅರ್ಥವಾಗದೇ ಇರುವ ಸಾಧ್ಯತೆಯೂ ಇರುತ್ತದೆ. ಆದರೆ ಡಿಜಿಟಲ್ ಕ್ಲಾಸ್ ಪೂರ್ವಮುದ್ರಿತ ಕ್ಲಾಸ್ ಆಗಿರುತ್ತದೆ. ಡಿಜಿಟಲ್ ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಸರಿಯಾಗಿ ಅರ್ಥವಾಗುವ ಶೈಲಿಯಲ್ಲಿ ತರಗತಿಗಳನ್ನು ತಯಾರು ಮಾಡಿರುವುದರಿಂದ ಆನ್ಲೈನ್ ತರಗತಿಗಿಂತ ಡಿಜಿಟಲ್ ತರಗತಿ ಹೆಚ್ಚು ಸಹಕಾರಿಯಾಗಿರುತ್ತದೆ.
ಜ್ಯೋತಿಷ ಮಿತ್ರ ಸಂಸ್ಥೆಯ“ಡಿಜಿಟಲ್ ಜ್ಯೋತಿಷ ಕ್ಲಾಸ್” ನ್ನು ಕನ್ನಡ ಓದಲು ಬರೆಯಲು ತಿಳಿದಿರುವ ಯಾರೂ ಬೇಕಾದರೂ ಕಲಿಯಬಹುದಾಗಿದೆ. ತರಗತಿಗೆ ಹಾಜರಾಗಲು ಲಿಂಕ್ ಕ್ಲಿಕ್ ಮಾಡಿ https://jyothishamithra.com/form/jyothish-class-registration

ಪಂಚಾಂಗ, ಜ್ಯೋತಿಷ, ಸಂಖ್ಯಾಶಾಸ್ತ್ರ, ಪ್ರಶ್ನಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಗ್ರಂಥವನ್ನು ಹೊರತರಬೇಕೆಂಬ ಬಯಕೆ ನಮ್ಮ ಸಂಸ್ಥೆಯದಾಗಿತ್ತು . ಆ ನಿಟ್ಟಿನಲ್ಲಿ “ಜ್ಯೋತಿಷ ಫಲ ಸಂಗ್ರಹ” ಎಂಬ ಗ್ರಂಥವನ್ನು ಹೊರತಂದಿದ್ದೇವೆ. ಈ ಗ್ರಂಥದ ಸಹಾಯದಿಂದ ಅತಿ ಸುಲಭವಾಗಿ, ಅತಿ ಕಡಿಮೆ ಅವಧಿಯಲ್ಲಿ ಜ್ಯೋತಿಷ ಶಾಸ್ತ್ರವನ್ನು ಕಲಿಯಬಹುದಾಗಿದೆ. ಗ್ರಂಥವನ್ನು ಆರ್ಡರ್ ಮಾಡಲು ಲಿಂಕ್ ಕ್ಲಿಕ್ ಮಾಡಿ https://jyothishamithra.com/jyothisha-phala-sangraha
ಸಸ್ನೇಹ ಪ್ರಣಾಮಗಳೊಂದಿಗೆ
- ಶ್ರೀಷ ಎಸ್ (ಸಂಪಾದಕರು)
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9986671473 / 9535283535
jmonlinemagazine@gmail.com
