ಶನಿಯ ಕ್ರೂರ ದೃಷ್ಟಿ ಎಷ್ಟೊಂದು ಅಪಾಯಕಾರಿ ಗೊತ್ತಾ ?
ಆಯುಷ್ಯ, ಕರ್ಮ, ಅನಾರೋಗ್ಯ, ಬಡತನ, ದುಃಖ, ದುರ್ಬುದ್ಧಿ, ಅನ್ಯಾಯ, ಬೇಸರ, ಕತ್ತಲು, ಅಸತ್ಯಕ್ಕೆ ಕಾರಕನಾದ ಶನಿಯು 17-01-2023 ರಂದು ಮಕರ ರಾಶಿಯಿಂದ ಕುಂಭ ರಾಶಿಯನ್ನು ಪ್ರವೇಶಿವನು. ಕುಂಭರಾಶಿಯಲ್ಲಿ ಶನಿಯು ಎರಡುವರೇ ವರ್ಷ ಸಂಚಾರ ಮಾಡುವನು. ಧನುರಾಶಿಯವರಿಗೆ ಏಳುವರೇ ಶನಿ ಮುಕ್ತಾಯವಾದರೇ, ಮೀನರಾಶಿಯವರಿಗೆ ಎಳುವರೆ ಶನಿ ಆರಂಭವಾಗುತ್ತದೆ.

ಶನಿ ಕುಂಭರಾಶಿಯಿಂದ ತನ್ನ ಮೂರನೇ ದೃಷ್ಟಿಯಿಂದ ಮೇಷರಾಶಿಯನ್ನು, ಏಳನೇ ದೃಷ್ಟಿಯಿಂದ ಸಿಂಹರಾಶಿಯನ್ನು, ಹತ್ತನೇ ದೃಷ್ಟಿಯಿಂದ ವೃಶ್ಚಿಕ ರಾಶಿಯನ್ನು ವೀಕ್ಷಿಸುವನು. ಮೇಷ, ಸಿಂಹ, ವೃಶ್ಚಿಕರಾಶಿಯನ್ನು ಶನಿ ವೀಕ್ಷಿಸುವುದರ ಪರಿಣಾಮ ಈ ಮೂರು ರಾಶಿಯವರ ಮಾನಸಿಕ ಆರೋಗ್ಯ ಹದಗೆಡುತ್ತದೆ. ಸೋಮಾರಿತ, ಏಕಾಂಗಿ ಎಂಬ ಭಾವನೆ ಉಂಟಾಗುತ್ತದೆ. ಶನಿಯು ತಾನು ಇದ್ದ ಮನೆಯನ್ನು ಒಳಿತುಮಾಡಿ ನೋಡುವ ಮನೆಯನ್ನು ನಾಶ ಮಾಡುತ್ತಾನೆ. ಈ ಕಾರಣದಿಂದಾಗಿ ಮುಂದಿನ ಎರಡುವರೇ ವರ್ಷ ಮೇಷ, ಸಿಂಹ, ವೃಶ್ಚಿಕರಾಶಿಯವರು ಆದಷ್ಟು ಎಚ್ಚರದಿಂದಿರಬೇಕು.

