ನಿತ್ಯ ಪಂಚಾಂಗ

ಶ್ರೀ ಪ್ರತ್ಯಂಗಿರಾ ದೇವಿ ಮಂತ್ರ ಪ್ರಯೋಗ

lllllhhh

ಆದಿ ಪರಾಶಕ್ತಿಯ ಒಂದು ರೂಪವಾಗಿರುವ ಪ್ರತ್ಯಂಗಿರಾ ದೇವಿ, ಶತ್ರು ಸಂಹಾರಕ್ಕಾಗಿಯೇ ಹುಟ್ಟಿಬಂದವಳು. ಪ್ರತ್ಯಂಗಿರಾ ಮಾತೆ ವಿಷ್ಣು ಮತ್ತು ಶಿವ , ಇವರಿಬ್ಬರ ಅಂಶವನ್ನ ಹೊಂದಿದ ದೇವಿಯಾಗಿದ್ದಾಳೆ. ಸಿಂಹರೂಪಿಣಿಯಾಗಿರುವ ಈಕೆ, ಸಿಂಹದ ಮುಖ ಮತ್ತು ಸ್ತ್ರೀ ದೇಹವನ್ನು ಹೊಂದಿದ್ದಾಳೆ. ಸಿಂಹ ಈಕೆಯ ವಾಹನವಾಗಿದೆ. ದೇವಿಯನ್ನು ಆರಾಧಿಸುವವರಿಗೆ ಯಾವುದೆ ರೀತಿಯ, ಗಂಡಾಂತರವಾಗಲಿ, ಅಪಾಯಗಳಾಗಲಿ, ಶತ್ರು ಬಾಧೆಯಾಗಲಿ ಇಲ್ಲವೆ ಭಯವಾಗಲಿ ಇರುವುದೆ ಇಲ್ಲ ಎಂದರ್ಥ. ಅಷ್ಟು ಮಹತ್ವ ಪಡೆದಿದ್ದಾಳೆ ಪ್ರತ್ಯಂಗಿರಾ ದೇವಿ.

lliii

ವಶ್ಯಕರೀಪ್ರತ್ಯಂಗಿರಾ ಪ್ರಯೋಗ :

ಓಂ ಶತ್ರುಕಾರ್ಯ ಹಾನಿಕರಿ | ಮಮ ಕಾರ್ಯಸಿದ್ಧಿಕರಿಶತ್ರೂಣಾಂ ಉದ್ಯೋಗ ವಿಘ್ನಕರಿ | ಮಮ ಸರ್ವೋದ್ಯೋಗ ವಶ್ಯಕರಿ | ಪ್ರತ್ಯಂಗಿರೇ ಸ್ವಾಹಾ ||

ತಾತ್ವರ್ಯ : ಯೇ ಪ್ರತ್ಯಂಗಿರಾ ದೇವಿ ನನ್ನ ಶತ್ರುಗಳ ಕಾರ್ಯಗಳಿಗೆ ಹಾನಿಮಾಡುವವಳೇ ನನ್ನ ಕಾರ್ಯಗಳನ್ನು ಸಿದ್ಧಿ ಮಾಡುವವಳೇ, ಶತ್ರುಗಳ ಕಾರ್ಯಗಳಿಗೆ ವಿಘ್ನವನ್ನು ಉಂಟುಮಾಡಿ ನನ್ನೆಲ್ಲಾ ಕಾರ್ಯಗಳನ್ನೂ ನಡೆಸಿಕೊಡುವ ದೇವಿಯೇ ನಿನ್ನನ್ನ ಆವಾಹನೆ ಮಾಡುತ್ತಿದ್ದೇನೆನಮ್ಮನ್ನು ರಕ್ಷಿಸು.

ttyyh

ನಾರಾಯಣೀ  ಪ್ರತ್ಯಂಗಿರಾ ಪ್ರಯೋಗ :

ಓಂ ಆಂ ಹ್ರೀಂ ಕ್ರೋಂ ಕೃಷ್ಣವಾಸಸೇ ಶತ ಸಹಸ್ರ ಸಿಂಹವದನೆ ಮಹಾ ಭೈರವೀ ಜ್ವಲಜ್ವಲ ಜ್ವಾಲಾ ಜಿಹ್ವಾ | ಕರಾಳವದನೇ ಪ್ರತ್ಯಂಗಿರೇ ಹ್ರೀಂ ಕ್ಷ್ರೌಂ ಓಂ ನಮೋ ನಾರಾಯಣಾಯ ಓಂಘೃಣಿ ಸೂರ್ಯ ಆದಿತ್ಯೋಂ ಸಹಸ್ರಾರ ಹುಂ ಘಟ್ ||

ತಾತ್ವರ್ಯಕಪ್ಪು ವಸ್ತ್ರ ಧರಿಸಿರುವ ಲಕ್ಷ ಸಿಂಹ ಮುಖಿಯುಳ್ಳವಳೇ ಮಹಾ ಭೈರವೀ ಜ್ವಾಲೆಗಳೇ ನಾಲಿಗೆಯಾಗಿರುವ ಪ್ರಜ್ವಲಿಸುವ ಕರಾಳವದನೇಪ್ರತ್ಯಂಗಿರೇ, ಲಕ್ಷ್ಮೀ ಗರುಡ ಸ್ವರೂಪಿಣೀ, ನಾರಾಯಣ ಸ್ವರೂಪಿಣೀ,    ಪಾವಿತ್ರತೆಯನ್ನು    ಕರುಣಿಸುವ ಸರ್ವ ಸ್ವರೂಪಿಣೀ, ಸುದರ್ಶನ ಸ್ವರೂಪಿಣೀ, ಹೇ ತಾಯಿ ನನ್ನೆಲ್ಲ ಶತ್ರುಗಳನ್ನೂ ಕ್ಷಣಾರ್ಧದಲ್ಲಿ ನಾಶಮಾಡುನನಗೆ ಜಪತಪಾದಿ ಗಳೆಲ್ಲದರಲ್ಲೂ ವಿಘ್ನವನ್ನುಂಟು ಮಾಡುವ ನನ್ನೆಲ್ಲಾ ಶತ್ರುಗಳನ್ನೂ ಕ್ಷಣಮಾತ್ರದಲ್ಲಿ ನಾಶಮಾಡುನನ್ನನ್ನ ಕಂಡೊಡನೆ ದುಷ್ಟಶಕ್ತಿಗಳು ಓಡಿಹೋಗುವಂತೆ ನನಗೆ ವಜ್ರಕವಚವನ್ನು ಅನುಗ್ರಹಿಸು.

rree

ಭಕ್ಷಿಣೀ  ಪ್ರತ್ಯಂಗಿರಾ  ಪ್ರಯೋಗ :

ಕ್ಷಂ ಹ್ರಾಂ ಕ್ರೀಂ ಭಕ್ಷಜ್ವಾಲಾ ಜಿಹ್ವಾಕರಾಳದಂಷ್ಟೇಪ್ರತ್ಯಂಗಿರೇ ಕ್ಷಂ ಹ್ರಾಂ ಕ್ರೀಂ ಹುಂ ಘಟ್ ಸ್ವಾಹಾ ||

ತಾತ್ವರ್ಯ : ಜ್ವಾಲೆಗಳನ್ನೇ ನಾಲಿಗೆಯಾಗಿ ಹೊಂದಿರುವಭೀಕರವಾದ ಕೋರ ಹಲ್ಲುಗಳಿಂದ ಕೂಡಿರುವ ಭಯಂಕರ ರೂಪವನ್ನು ಹೊಂದಿರುವ ಪ್ರತ್ಯಂಗಿರಾ ದೇವಿಯೇ ನಮ್ಮ ಶತ್ರುಗಳನ್ನೆಲ್ಲಾ ಕೂಡಲೇ ಭಕ್ಷಿಸುಯಾವ ಜನ್ಮದಲ್ಲೂ ನಿನ್ನ ಭಕ್ತರಾದ ನಮಗೆ ಶತ್ರುಗಳೇ  ಇಲ್ಲದಿರಲಿ.

yyttrr

yyhjk