
ಸುಖ, ಐಶ್ವರ್ಯ, ಸ್ತ್ರೀ, ಕಾಮ, ಭೋಗ, ವಿವಾಹ, ಪ್ರೀತಿ, ಪ್ರೇಮ, ವಾಹನ, ಗೃಹ, ಚಿನ್ನಾಭರಣ ಇವುಗಳಿಗೆ ಕಾರಕನಾದ ಶುಕ್ರನು ದಿನಾಂಕ 22-01-2023 ರಿಂದ 15-02-2023 ವರೆಗೆ ಕುಂಭರಾಶಿಯಲ್ಲಿ ಸಂಚಾರ ಮಾಡುವನು. ದ್ವಾದಶ ರಾಶಿಗಳ ಮೇಲೆ ಶುಕ್ರ ಗೋಚಾರ ಫಲವನ್ನು ತಿಳಿಯೋಣ ಬನ್ನಿ...
ಮೇಷರಾಶಿ : ಧನಲಾಭವಾಗಿವುದು. ಸಂಪತ್ತು ಪ್ರಾಪ್ತಿಯಾಗುವುದು. ಸ್ತ್ರೀಯರಿಂದಲೂ ಲಾಭವಾಗುವುದು. ಅನಾರೋಗ್ಯ ಸಮಸ್ಯೆ ದೂರವಾಗುವುದು. ಸ್ತ್ರೀ ದೇವತಾರಾಧನೆಯಿಂದ ವಿಶೇಷವಾದ ಲಾಭವಾಗುವುದು. ಅವಿವಾಹಿತರಿಗೆ ವಿವಾಹಯೋಗ ಕೂಡಿಬರುವುದು.
ವೃಷಭ ರಾಶಿ : ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವುದು. ಪ್ರಮೋಷನಿಗೆ ಪ್ರಯತ್ನಿಸುವವರು ಶುಭ ಸುದ್ಧಿ ಕೇಳುವಿರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ವಿಶೇಷವಾದ ಲಾಭವಾಗುವುದು. ಸಣ್ಣಪುಟ್ಟ ಅರೋಗ್ಯ ಸಮಸ್ಯೆಯಿಂದ ಬಳಲುವಿರಿ. ಸಮಾಜದ ಗೌರವಕ್ಕೆ ಪಾತ್ರರಾಗುವಿರಿ.
ಮಿಥುನ ರಾಶಿ : ಭಾಗ್ಯೋದಯವಾಗುವುದು. ದೇವತಾರಾಧನೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿ ಲಭಿಸುವುದು. ಐಷಾರಾಮಿ ಸಾಮಾಗ್ರಿಗಳನ್ನು ಖರೀದಿಸುವಿರಿ. ಧನಲಾಭವಾಗುವುದು. ನಿಮ್ಮ ತಂದೆಯ ಆರೋಗ್ಯದ ಬಗ್ಗೆ ಗಮನಕೊಡಿ.
ಕರ್ಕಾಟಕ ರಾಶಿ : ಅನಾರೋಗ್ಯ ಸಮಸ್ಯೆ ದೂರವಾಗುವುದು. ಸುಖ-ಭೋಗಕ್ಕೆ ಅಧಿಕ ಧನವ್ಯಯ ಮಾಡುವಿರಿ. ಆಕಸ್ಮಿಕವಾಗಿ ಧನಲಾಭವಾಗುವುದು. ಮನೆಯಲ್ಲಿ ನೆಮ್ಮದಿ ಇಲ್ಲದಾಗು ವುದು. ಮಾತೃವಿನೊಂದಿಗೆ ಕಲಹ ಉಂಟಾಗುವುದು. ಸ್ತ್ರೀಯರಿಂದ ಅಪವಾದ ಉಂಟಾಗುವುದು.

ಸಿಂಹ ರಾಶಿ : ಮಿತ್ರರಿಂದ ಲಾಭವಾಗುವುದು. ಮನೆಯಲ್ಲಿ ಶುಭಕಾರ್ಯಗಳು ನೆರವೇರುವುದು. ಮಾಡುತ್ತಿರುವ ಉದ್ಯೋಗದಲ್ಲಿ ಧನಾತ್ಮಕವಾದ ಬದಲಾವಣೆ ಯಾಗುವುದು. ಗೃಹ / ವಾಹನ/ ಭೂಮಿ ಖರೀದಿಸುವವರಿಗೆ ಇದು ಸಕಾಲವಾಗಿದೆ. ಹೆಚ್ಚಿನ ಸಮಯವನ್ನು ಮೋಜು – ಮಸ್ತಿನಲ್ಲಿ ಕಳೆಯುವಿರಿ.
ಕನ್ಯಾ ರಾಶಿ : ಆಕಸ್ಮಿಕವಾಗಿ ಧನವ್ಯಯವಾಗುವುದು. ದೇವತಾ ಕಾರ್ಯಗಳನ್ನು ನೆರವೇರಿಸುವಾಗ ವಿಘ್ನಗಳು ಎದುರಾಗುವುದು. ಮಕ್ಕಳಿಂದ ಲಾಭವಾಗುವುದು. ಕೊಟ್ಟ ಹಣ ಕೈಸೇರದೆ ಆತಂಕಕ್ಕೊಳಗಾಗುವಿರಿ. ತಂದೆಯ ಆರೋಗ್ಯದ ಬಗ್ಗೆ ಗಮನಕೊಡಿ.
ತುಲಾ ರಾಶಿ : ಧಾರ್ಮಿಕ ಕಾರ್ಯಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ. ಅವಿವಾಹಿತರಿಗೆ ವಿವಾಹಯೋಗ ಕೂಡಿಬರುವುದು. ಐಷಾರಾಮಿ ಸಾಮಾಗ್ರಿಗಳನ್ನು ಖರೀರಿಸುವಿರಿ. ಸ್ತ್ರೀಯರಿಂದ ಲಾಭವಾಗುವುದು. ದುರ್ಗೆಯ ಅನುಗ್ರಹ ನಿಮಗಿರುವುದು. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಗಮನಕೊಡಿ.
ವೃಶ್ಚಿಕ ರಾಶಿ : ವಾಹನ / ಭೂಮಿ / ಗೃಹ / ಚಿನ್ನಾಭರಣ ಖರೀದಿಸಲು ಇದು ಸಕಾಲವಾಗಿದೆ. ಮನೆಯಲ್ಲಿ ಶುಭಕಾರ್ಯಗಳು ನೆರವೇರುವುದು. ಮಿತ್ರರಿಂದ ಲಾಭವಾಗುವುದು. ವ್ಯಾಪಾರ – ವ್ಯವಹಾರ ಮಾಡುವವರಿಗೆ ಹೆಚ್ಚಿನ ಲಾಭವಾಗುವುದು. ಸ್ತ್ರೀ ದೇವತಾರಾಧನೆಯಿಂದ ವಿಶೇಷವಾದ ಲಾಭವಾಗುವುದು.
ಧನು ರಾಶಿ : ಭಾಗ್ಯೋದಯವಾಗುವುದು. ತಂದೆಯಿಂದ ಲಾಭ ವಾಗುವುದು. ಸಹೋದರ / ಸಹೋದರಿಗೆ ಸಣ್ಣಪುಟ್ಟ ಅನಾರೋಗ್ಯ ಸಮಸ್ಯೆ ಉಂಟಾವುದು. ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸ ಹೋಗುವಿರಿ. ಗಂಟಲಿನ ಭಾಗದ ಅನಾರೋಗ್ಯ ಸಮಸ್ಯೆಯಿಂದ ಬಳಲುವಿರಿ.
ಮಕರ ರಾಶಿ : ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವುದು. ಪ್ರಮೋಷನಿಗೆ ಪ್ರಯತ್ನಿಸುತ್ತಿರುವವರು ಶುಭ ಸುದ್ದಿ ಕೇಳುವಿರಿ. ಆಕಸ್ಮಿಕವಾಗಿ ಧನಲಾಭವಾಗುವುದು. ಕೌಟುಂಬಿಕ ಸಮಸ್ಯೆಗಳು ದೂರವಾಗುವು. ಕುಟುಂಬದಲ್ಲಿ ಶುಭಕಾರ್ಯಗಳು ನೆರವೇರುವುದು. ಸ್ತ್ರೀಯರಿಂದ ಲಾಭವಾಗುವುದು.
ಕುಂಭ ರಾಶಿ : ಮೋಜು-ಮಸ್ತಿಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ಅವಿವಾಹಿತರಿಗೆ ವಿವಾಹಯೋಗ ಕೂಡಿಬರುವುದು. ವ್ಯಾಪಾರ-ವ್ಯವಹಾರ ಮಾಡುತ್ತಿರುವವರಿಗೆ ಆಕಸ್ಮಿಕವಾಗಿ ಧನಲಾಭವಾಗುವುದು. ತಂದೆಯಿಂದ ಲಾಭವಾಗುವುದು. ಐಷಾರಾಮಿ ಸಾಮಾಗ್ರಿಗಳನ್ನು ಖರೀದಿಸುವಿರಿ.
ಮೀನ ರಾಶಿ : ಧನಲಾಭವಾಗುವುದು ಆದರೆ ಐಷಾರಾಮಿ ಜೀವನಕ್ಕೋಸ್ಕರ ಅಧಿಕ ಧನವ್ಯಯವಾಗುದು. ಅನಾರೋಗ್ಯ ಸಮಸ್ಯೆ ದೂರವಾಗುವುದು. ದೂರದ ಊರಿಗೆ ಪ್ರವಾಸ ಹೋಗುವಿರಿ. ಬಾಳಸಂಗಾತಿಯೊಂದಿಗೆ ಸಣ್ಣಪುಟ್ಟ ವಿಷಯಕ್ಕೆ ಜಗಳವಾಡುವಿರಿ.
