ನಿತ್ಯ ಪಂಚಾಂಗ

ಶುಕ್ರನು ನಿಮ್ಮ ಜಾತಕದಲ್ಲಿ ಈ ಸ್ಥಾನದಲ್ಲಿದ್ದರೆ ನೀವು ಭಾಗ್ಯವಂತರು.

cover pg

    ಜಾತಕದ  ಜನ್ಮಕುಂಡಲಿಯಲ್ಲಿ ದ್ವಾದಶ ಭಾವಗಳಿದ್ದು,  ಎಲ್ಲಾ ಭಾವಗಳಲ್ಲಿ ಭಾಗ್ಯ(ನವಮ) ಭಾವವೇ ಶುಭವಾಗಿದ್ದು ಭಾಗ್ಯಭಾವಕ್ಕಿಂತಲೂ ಲಗ್ನಭಾವವು ಅತ್ಯಂತ ಶುಭವಾಗಿದೆ. “ ಲಗ್ನಂ ಕೇಂದ್ರ ತ್ರಿಕೋಣತ್ವಾತ್ ಅತೀವ ಶುಭದಂ ಮತಮ್ ” ಎನ್ನುವಂತೆ ಲಗ್ನವು ಅತ್ಯಂತ ಶ್ರೇಷ್ಠವಾದರೆ ಪಂಚಮ ಮತ್ತು ನವಮಗಳು ಉತ್ತರೋತ್ತರವಾಗಿ ಶುಭಪ್ರದಗಳು. ಮನುಷ್ಯನ ಭಾಗ್ಯ, ಧರ್ಮ, ಕರುಣೆ, ದಯೆ, ಪುಣ್ಯ, ತಪಸ್ಸು, ಮಕ್ಕಳು, ಮೊಮ್ಮಕ್ಕಳು, ತಂದೆ, ದಾನ, ಉಪಾಸನೆ, ಸೌಭಾಗ್ಯ, ಗುರುಗಳು ನವಮದಿಂದ ಚಿಂತಿಸಲ್ಪಡುವವು.

image

   “ ಭಾಗ್ಯೇ ಶುಭಗ್ರಹಯುತೇ ಸಮುಪೈತಿ ಭಾಗ್ಯಮ್ “ ಎನ್ನುವಂತೆ ಭಾಗ್ಯದಲ್ಲಿರುವ ಶುಭಗ್ರಹರು ಶುಭಫಲವನ್ನು, “ಪಾಪೋSಪಿ ತುಂಗನಿಜಮಿತ್ರಗೃಹೋಪಗಶ್ಚೇತ್ ಭಾಗ್ಯೇ ತು ಭಾಗ್ಯಫಲದಃ ಸತತಂ ನರಣಾಮ್” ಎನ್ನುವಂತೆ ಪಾಪಗ್ರಹನು ಬಲಿಷ್ಠನಾಗಿ ನವಮದಲ್ಲಿರಲು ಶುಭಫಲವನ್ನು ನೀಡುವನು.

image

     ಭೋಗಕಾರಕನೆಂದೇ ಪ್ರಸಿದ್ಧನಾದವನು ಶುಕ್ರನು. ಈತನ ವಯಸ್ಸು 16 ಜಾತಕದಲ್ಲಿ  ಶುಕ್ರನು ಬಲಿಷ್ಠನಾಗಿದ್ದರೆ ಹತ್ತು ಸಾವಿರ ದೋಷಗಳನ್ನು ನಾಶಪಡಿಸುವನು. ರಾಹು, ಬುಧ, ಶನಿ, ಕುಜ ದೋಷವನ್ನು ಬಲಿಷ್ಠ ಶುಕ್ರನು  ಪರಿಹರಿಸಬಲ್ಲ. ಜನ್ಮ ಕುಂಡಲಿಯಿಯಲ್ಲಿ ನವಮ ಭಾವದಲ್ಲಿ ಶುಕ್ರನಿದ್ದರೆ ಏನು ಫಲ ನೀಡುತ್ತಾನೆಂದು ತಿಳಿದುಕೊಳ್ಳೋಣ….

      ಶುಭಗ್ರಹರು ನವಮದಲ್ಲಿರುವಾಗ ದೇವ, ಗುರು,ಪಿತೃ ಅನುಗ್ರಹಭಾಗ್ಯ, ಧರ್ಮಗಳ ವೃದ್ಧಿ,ತಪಸಿದ್ಧಿ, ಪುತ್ರಪೌತ್ರಾದಿಸೌಖ್ಯ ಪ್ರಾಪ್ತಿಯಾಗುವುದು. ಅದರಲ್ಲಿಯೂ ಶುಕ್ರನು ಈ ಸ್ಥಾನದಲ್ಲಿದ್ದಾಗ ಜಾತಕನು ಹುಟ್ಟು ಭಾಗ್ಯವಂತನಾಗುವನು. ಸುಖ, ಪ್ರೀತಿ, ಭೋಗ, ಅಲಂಕಾರ, ಮೃದು-ಮಧುರನುಡಿ, ಸ್ತ್ರೀಸಹಜ ಪ್ರವೃತ್ತಿಗಳು ಶುಕ್ರನ ಮುಖ್ಯ ಲಕ್ಷಣಗಳು. ಇವುಗಳಿಂದಲೇ ಭಾಗ್ಯಪ್ರಾಪ್ತಿಯಾಗುವುದು. ಭಾಗ್ಯದೇವತೆ ಲಕ್ಷ್ಮೀಯನ್ನು ಶುಕ್ರನಿಂದ ಚಿಂತಿಸುವ ಪ್ರಯುಕ್ತ ಈತನನ್ನು  “ ಭಾಗ್ಯಗ್ರಹ” ಎಂದೇ ಕರೆಯಬಹುದು.

image

      ಶುಕ್ರನು ಬಲಿಷ್ಠನಾದಾಗ ಸ್ತ್ರೀಯರಿಂದ ಭಾಗ್ಯಪ್ರಾಪ್ತಿಯಾಗುವುದು. ಅಲಂಕಾರ ವಸ್ತುಗಳಿಂದ , ಭೋಗಸಾಮಾಗ್ರಿಗಳಿಂದ, ಹೈನುಗಾರಿಕೆಯಿಂದ, ವಸ್ತುಗಳ ಮಾರಾಟದಿಂದ, ಕಲೆಸಂಗೀತದಿಂದ ಭಾಗ್ಯಪ್ರಾಪ್ತಿಯಾಗುವುದು. ಬುಧನು ಲೌಕಿಕ ಬುದ್ಧಿಮತ್ತೆಗೆ ಸೂಚಕನಾದರೆ, ಗುರುವು ಶಾಸ್ತ್ರಬುದ್ಧಿಗೂ, ಶುಕ್ರನು ಕಲಾಬುದ್ಧಿಗೂ ಸೂಚಕರಾಗಿರುವನು. ಕಲಾವಿದರಿಗೂ, ಸಂಗೀತಜ್ಞರಿಗೂ ಬಲಿಷ್ಠ ಶುಕ್ರ ಭಾಗ್ಯದ ಬಾಗಿಲನ್ನೇ ತೆರೆಯುವನು.

image

      ಶುಭಗ್ರಹಯುಕ್ತನಾದಾಗ ಶುಭಫಲ ನೀಡಿದರೆ ಕುಜ-ರಾಹುಗಳಿಂದ ಯುಕ್ತನಾದರೆ ಪಾಪಪ್ರವೃತ್ತಿಗೂ, ಅಸಹಜ  ಸ್ತ್ರೀ ಸಂಪರ್ಕಕ್ಕೂ ಕಾರಣನಾಗುವನು.ಶುಕ್ರ-ಶನಿ ಯೋಗವು ಲಂಪಟತನಕ್ಕೆ  ಕಾರಣವಾದರೆ ಶುಕ್ರ-ಚಂದ್ರರ ಯೋಗವು ದ್ವಿಕಳತ್ರ ಯೋಗವನ್ನುಂಟು ಮಾಡಬಹುದು. ಮಕರ, ಕುಂಭ, ಮಿಥುನ ಲಗ್ನಗಳಿಗೆ ಯೋಗಕಾರಕನಾದಾ ಈತನು ಬುಧನೊಂದಿಗೆ ಸೇರಿದರೆ ರಾಜಯೋಗವನ್ನುಂಟು ಮಾಡುವನು.

ಜಾಹಿರಾತು

 

image