ತೇಜಸ್ವಿ ಸೂರ್ಯರ ಜನ್ಮ ದಿನಾಂಕದಲ್ಲಿದೆ ರಾಜಯೋಗ

ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ. ಅತ್ಯುತ್ತಮ ವಾಗ್ಮೀ. ಕನ್ನಡ, ಆಂಗ್ಲ ಹಾಗೂ ಹಿಂದಿ ಭಾಷೆಗಳ ಮೇಲೆ ಹಿಡಿತವಿಟ್ಟು ಕೊಂಡಿರುವ ತೇಜಸ್ವಿ ಸೂರ್ಯ ಆರ್ ಎಸ್ ಎಸ್ ಹಿನ್ನೆಲೆಯುಳ್ಳವರು. ವೃತ್ತಿಯಲ್ಲಿ ವಕೀಲ. ತೇಜಸ್ವಿ ಸೂರ್ಯಗೆ ಈಗ 30 ವರ್ಷ ವಯಸ್ಸು.

ಇವರ ಹೆಸರಿನಲ್ಲಿ ಒಂದು ಸೂರ್ಯ ಮಾತ್ರವಿದ್ದರೆ, ಸಂಖ್ಯಾಶಾಸ್ತ್ರದ ಪ್ರಕಾರ ಇವರ ಜನ್ಮ ದಿನಾಂಕದಲ್ಲಿ ನಾಲ್ಕು ಸೂರ್ಯರು ಇರುವುದು ವಿಶೇಷ.
ತೇಜಸ್ವಿ ಸೂರ್ಯರ ಜನ್ಮ ದಿನಾಂಕ 16-11-1990
ಜನ್ಮಸಂಖ್ಯೆ : 7 ಭವಿಷ್ಯಸಂಖ್ಯೆ : 1 ನಾಮಸಂಖ್ಯೆ : 7
ಜನ್ಮಸಂಖ್ಯೆ ಮತ್ತು ನಾಮಸಂಖ್ಯೆ 7 ಇದು ವಿಪರೀತ ಜ್ಞಾನ ಕಾರಕನಾದ ಕೇತು ಗ್ರಹದ ಸಂಖ್ಯೆ. ತಂತ್ರಗಾರಿಕೆ, ಸನ್ಯಾಸಿ, ವೈರಾಗ್ಯ, ಮುಕ್ತಿ,ಮೋಕ್ಷ, ಯಾತ್ರೆ, ದೇವರಲ್ಲಿ ಭಕ್ತಿ, ವಕೀಲವೃತ್ತಿ, ಕೋರ್ಟ್, ಆಧ್ಯಾತ್ಮ ಚಿಂತಕ, ಗುಪ್ತವಿದ್ಯೆ, ಯೋಗಸಾಧನೆ, ಮಾತಾಮಹಾ, ವಿಪರೀತ ಜ್ಞಾನ, ಮಾಯ,ವಿಜ್ಞಾನಿ, ಇಂಟರ್ನೆಟ್, ಪಶುಪಕ್ಷಿಗಳಲ್ಲಿ ಪ್ರೀತಿ, ದೇವರ ಕಾರ್ಯ ಮಾಡುವುದು, ಜ್ಯೋತಿಷ್ಯ, ಸದಾಸಂಚಾರಿ. ಇವೆಲ್ಲಾ ಕೇತುಗ್ರಹದ ಧನಾತ್ಮಕ ಕಾರಕಗಳು.

ಭವಿಷ್ಯಸಂಖ್ಯೆ 1 ಇದು ರಾಜಕೀಯ ಕಾರಕನಾದ ರವಿ ಗ್ರಹದ ಸಂಖ್ಯೆ. ರವಿಯು ಪಿತೃಕಾರಕನು ಹಾಗೂ ಆತ್ಮಕಾರಕ ನಾಗಿರುತ್ತಾನೆ. ಸರ್ಕಾರದ ಕೆಲಸ, ಉನ್ನತ ಅಧಿಕಾರಿಯವರೊಂದಿಗೆ ಸ್ನೇಹ, ರಾಜಕೀಯ, ಮಂತ್ರಿ, ಉನ್ನತ ಸ್ಥಾನಮಾನ, ವಿದ್ಯುತ್, ರಾಜ್ಯಾಧಿಪತ್ಯ ರಾಜಸೇವೆ, ಉತ್ಸಾಹ, ಯುದ್ಧದಲ್ಲಿ ಜಯ, ಈಶ್ವರ ಆರಾಧನೆ, ಯಜ್ಞಯಾಗಾದಿಗಳು, ಸಿಂಹಾಸನ, ಉಷ್ಣಪ್ರಕೃತಿ, ನ್ಯಾಯವಾದಿ, ಆಕರ್ಷಕ ವ್ಯಕ್ತಿತ್ವ, ಖ್ಯಾತಿ, ವಾಕ್ಪಟುತ್ವ, ಧೀರ, ಬುದ್ಧಿವಂತ, ಶಿಸ್ತಿನ ಮನುಷ್ಯ. ಇವೆಲ್ಲಾ ರವಿ ಗ್ರಹದ ಧನಾತ್ಮಕ ಕಾರಕಗಳು.

ಇವರ ಜನ್ಮ ದಿನಾಂಕದಲ್ಲಿ ಸಂಖ್ಯೆ 1 ನಾಲ್ಕು ಸಲ ಪುನರಾವರ್ತನೆ ಆಗಿರುತ್ತದೆ. ಅಷ್ಟೇ ಅಲ್ಲದೆ ಇವರ ಭವಿಷ್ಯ ಸಂಖ್ಯೆಯೂ 1 ಆಗಿರುವುದರಿಂದ ರವಿ ಗ್ರಹಕ್ಕೆ ಸಂಪೂರ್ಣ ಬಲ ಬಂದಂತಾಯಿತು. ಇವರ ಜನ್ಮ ಜಾತಕದಲ್ಲಿ ಉಚ್ಚ ಗುರುವು ರವಿಯನ್ನು ವೀಕ್ಷಿಸುತ್ತಿರುವನು.
ಕೇತುವಿನಲ್ಲಿ ಜ್ಞಾನ, ಆಕಸ್ಮಿಕ, ವಿಪರೀತ ಈ ಮೂರು ಗುಣಗಳಿರುತ್ತವೆ. ಜನ್ಮಸಂಖ್ಯೆ ಗುಣಲಕ್ಷಣವನ್ನು ನಿರ್ಧರಿಸಿದರೆ, ಭವಿಷ್ಯಸಂಖ್ಯೆ ಜೀವನದ ಮಾರ್ಗವನ್ನು (ವೃತ್ತಿಯನ್ನು) ನಿರ್ಧರಿಸುತ್ತದೆ.
ಕೇತು ಮತ್ತು ರವಿ ಗ್ರಹದ ಪ್ರಭಾವದಿಂದ ಸಣ್ಣ ವಯಸ್ಸಿನಲ್ಲಿ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದರು.
ಕೇತು ವಿಪರೀತ ಜ್ಞಾನ ಕಾರಕನಾಗಿರುವುದರಿಂದ ಇವರ ಮಾತಿನಲ್ಲಿ ಜ್ಞಾನದ ಭಂಡಾರವೇ ಇರುವುದರಿಂದ ಜನರು ಇವರತ್ತ ಆಕರ್ಷಿತರಾಗುತ್ತಾರೆ. ಒಟ್ಟಿನಲ್ಲಿ ತೇಜಸ್ವಿ ಸೂರ್ಯರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿರುವುದಂತು ನಿಜ.